ಬಿ.ಸಿ.ರೋಡು: ತಾಯಿ-ಮಗು ನಾಪತ್ತೆ
Update: 2016-07-01 09:45 IST
ವಿಟ್ಲ: ಮಹಿಳೆಯೋರ್ವರು ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಿ.ಸಿ. ರೋಡು ಸಮೀಪದ ಕಾಮಾಜೆ ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ, ಹೋಟೆಲ್ ಕಾರ್ಮಿಕ ಗಂಗಾಧರ ಪೂಜಾರಿ ಎಂಬವರ ಪತ್ನಿ ಅನಿತಾ ಹಾಗೂ ಆಕೆಯ ಐದರ ಹರೆಯದ ಹೆಣ್ಣು ಮಗು ಯಸ್ಮಿತಾ ಎಂಬವರೇ ಕಾಣೆಯಾದ ತಾಯಿ-ಮಗು. ಇಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಗಂಗಾಧರ ಎಂದಿನಂತೆ ಗುರುವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ ಬಳಿಕ ತಾಯಿ-ಮಗು ನಾಪತ್ತೆಯಾಗಿದ್ದಾರೆ ಎಂದು ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.