×
Ad

ರೂಮಿ ಪಾತ್ರಕ್ಕೆ ಲಿಯೊನಾರ್ಡೊ ಬೇಡ : ಮನವಿಗೆ ಸಾವಿರಾರು ಜನರಿಂದ ಸಹಿ

Update: 2016-07-01 14:38 IST

ನ್ಯೂಯಾರ್ಕ್,ಜು.1 : ಹಾಲಿವುಡ್ ನಟ ಲಿಯೊನಾರ್ಡೊ ಡಿ ಕಾಪ್ರಿಯೋತಮ್ಮ ದಿ ರೆವ್ನೆಂಟ್ ಚಿತ್ರದಲ್ಲಿನ ನಟನೆಗಾಗಿ ಆಸ್ಕರ್ ಪ್ರಶಸ್ತಿ ಪಡೆದಾಗಅವರ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣಗಳು ಅವರ ಮೇಲೆ ಪ್ರಶಂಸೆಯ ಸುರಿಮಳೆಗೈದಿದ್ದವು. ಅವರೊಬ್ಬ ಪ್ರತಿಭಾವಂತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಮಸ್ಯೆ ಆರಂಭವಾಗಿದ್ದು ಆಸ್ಕರ್ ವಿಜೇತ ದಿ ಏವಿಯೇಟರ್ ಚಿತ್ರಕಥೆ ರಚನಾಕಾರ ಡೇವಿಡ್ ಫ್ರಾನ್ಝೋನಿಯವರ ಒಂದು ನಿರ್ಧಾರದಿಂದ. ಖ್ಯಾತ ಪಷಿರ್ಯನ್ ಕವಿ ರೂಮಿಯೆಂದೇ ಖ್ಯಾತರಾದ ಜಲಾಲುದ್ದೀನ್ ಅಲ್-ರೂಮಿಯವರ ಜೀವನಾಧರಿತ ಚಿತ್ರ ನಿರ್ಮಿಸಲು ಮನಸ್ಸು ಮಾಡಿರುವ ಡೇವಿಡ್, ಕವಿಯ ಪಾತ್ರಕ್ಕೆ ಲಿಯೊನಾರ್ಡೊರನ್ನು ಆರಿಸಿದ್ದು ಹೆಚ್ಚಿನವರಿಗೆ ಸರಿ ಕಂಡಿಲ್ಲ.

ಸಾಮಾಜಿಕ ಜಾಲತಾಣಗಳಂತೂ “ರೂಮಿವಾಸಂಟ್‌ವೈಟ್” ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಇದರ ವಿರುದ್ಧ ಅಭಿಯಾನವನ್ನೇ ಆರಂಭಿಸಿದವು.ಈ ನಿರ್ಧಾರದ ವಿರುದ್ಧದ ಆನ್ ಲೈನ್ ಅಪೀಲೊಂದಕ್ಕೆ ಈಗಾಗಲೇ 12,000 ಕ್ಕೂ ಮಿಕ್ಕಿ ಜನ ಸಹಿ ಹಾಕಿದ್ದಾರೆ. ಲಿಯೊನಾರ್ಡೊರವನ್ನು ಈ ಪಾತ್ರಕ್ಕೆ ಆರಿಸಿದಡೇವಿಡ್ ಅವರ ನಿರ್ಧಾರ‘‘ಹಾಸ್ಯಾಸ್ಪದ ಹಾಗೂ ಅಪಮಾನಕಾರಿಯಾಗಿದೆ’’ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

‘‘ರೂಮಿ ಅಮೇರಿಕಾದಲ್ಲಿ ಸಾಕಷ್ಟು ಜನಪ್ರಿಯರಾಗಿರುವುದರಿಂದ ಹಾಗೂ ಅವರ ಜೀವನದ ಬಗ್ಗೆ ಜನರಿಗೆ ಹೆಚ್ಚೇನೂ ಗೊತ್ತಿಲ್ಲದೇ ಇರುವುದರಿಂದ ಅದರ ಬಗ್ಗೆ ಜನರಿಗೆ ತಿಳಿಸುವ ಅಗತ್ಯವಿದೆ,’’ ಎಂದು ಡೇವಿಡ್ ಹೇಳಿದ್ದಾರೆ.

ತರುವಾಯ, ಲಿಯೊನಾರ್ಡೊಗೆ ಈ ಪಾತ್ರವನ್ನು ಮಾಡಬೇಕೆಂದು ಯಾರೂ ಹೇಳಿಲ್ಲ ಹಾಗೂ ಅವರು ಅದರ ಬಗ್ಗೆ ಯೋಚಿಸಿಲ್ಲ, ಎಂದು ನಟನಿಗೆ ಹತ್ತಿರದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News