ಕೋಟೆಕಾರ್: ಆಟೊರಿಕ್ಷಾಕ್ಕೆ ಕಾರು ಢಿಕ್ಕಿ, ರಿಕ್ಷಾ ಚಾಲಕ ಗಂಭೀರ
Update: 2016-07-01 18:15 IST
ಉಳ್ಳಾಲ, ಜು.1: ಕೊಟೆಕಾರು ಸಮೀಪ ಆಟೊ ರಿಕ್ಷಾವೊಂದಕ್ಕೆ ಹಿಂದಿನಿಂದ ಬಂದ ಆಲ್ಟೋ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿ ಹೊಡೆದು ನಜ್ಜುಗುಜ್ಜಾಗಿದ್ದು, ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರನ್ನು ಕುಂಪಲ ನಿವಾಸಿ ಸುಭಾಷ್(39)ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ಕುಂಪಲ ಬೈಪಾಸಿನ ರಿಕ್ಷಾ ಪಾರ್ಕ್‌ನಿಂದ ಪೆಟ್ರೋಲ್ ಹಾಕಿಸಲು ಕೋಟೆಕಾರಿನ ಕಡೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಆಲ್ಟೋ ಕಾರು ರಿಕ್ಷಾಕ್ಕೆ ಹಿಂಭಾಗದಿಂದ ಢಿಕ್ಕಿ ಹೊಡೆದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.