×
Ad

ಉಚ್ಚಿಲ: ಮುಂದುವರಿದ ಕಡಲ್ಕೊರೆತ; ಮನೆ ಸಮುದ್ರಪಾಲು

Update: 2016-07-01 18:19 IST

ಉಳ್ಳಾಲ, ಜು.1: ಕಳೆದ ಕೆಲವು ದಿನಗಳಿಂದ ಉಳ್ಳಾಲದ ಹಲವು ಪ್ರದೇಶಗಳು ಸೇರಿದಂತೆ ಉಚ್ಚಿಲದಲ್ಲಿ ಕಡಲ್ಕೊರೆತದ ಅಬ್ಬರ ವಿಪರೀತಗೊಂಡಿದ್ದು ಶುಕ್ರವಾರ ಬೆಳಗ್ಗೆ ಉಚ್ಚಿಲದಲ್ಲಿ ಮನೆಯೊಂದು ಭಾಗಶ: ಸಮುದ್ರಪಾಲಾಗಿದೆ.

ಉಚ್ಚಿಲ ಬಾಗದಲ್ಲಿ ಇದೀಗ ಕಲ್ಲುಗಳನ್ನು ತಂದು ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಕಾಮಗಾರಿ ಭರದಿಂದ ನಡೆಯುತ್ತಿದೆ. ಬುಧವಾರ ಸಂಜೆ ಉಚ್ಚಿಲ ನಿವಾಸಿ ಯಮುನಾ ಎಂಬವರ ಮನೆಯು ಭಾಗಶ: ಸಮುದ್ರಪಾಲಾಗಿದ್ದು, ಶುಕ್ರವಾರ ಬೆಳಗ್ಗೆ ಅದರ ಪಕ್ಕದಲ್ಲಿದ್ದ ವಸಂತ್ ಎಂಬವರ ಮನೆಯೂ ಸಮುದ್ರದ ಅಲೆಗಳಿಂದಾಗಿ ಭಾಗಶಃ ನೀರುಪಾಲಾಗಿದೆ.

ಗುರುವಾರ ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕ್ಷೇತ್ರದ ಶಾಸಕ ಸಚಿವ ಯು.ಟಿ ಖಾದರ್ ಅವರು ಶೀಘ್ರವಾಗಿ ತಾತ್ಕಾಲಿಕ ತಡೆಯ ಕಲ್ಲುಗಳನ್ನು ಹಾಕಲು ಜಿಲ್ಲಾಧಿಕಾರಿಗಳಲ್ಲಿ ಸೂಚಿಸಿದ್ದು, ಇದೀಗ ಕಲ್ಲುಗಳ ಮೂಲಕ ತಾತ್ಕಾಲಿಕ ತಡೆಗೋಡೆ ಕಾಮಗಾರಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News