×
Ad

ಬಾಳಿಗಾ ಹತ್ಯೆ ಪ್ರಕರಣದಲ್ಲಿ ಯು.ಟಿ. ಖಾದರ್, ಆಪ್ತಸಹಾಯಕರು ಹಸ್ತಕ್ಷೇಪ ಮಾಡಿಲ್ಲ

Update: 2016-07-01 19:02 IST

ಮಂಗಳೂರು, ಜು.1: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ಶೆಣೈ ಬಂಧನವಾದ ಬಗ್ಗೆ ಬಾಳಿಗ ಪ್ರಕರಣದ ತನಿಖೆಯಲ್ಲಿ ಇದುವರೆಗೆ ಸಚಿವ ಯು.ಟಿ. ಖಾದರ್ ಅವರಾಗಲೀ, ಅಥವಾ ಆಪ್ತಸಹಾಯಕರಾಗಲೀ ಇದುವರೆಗೆ ಹಸ್ತಕ್ಷೇಪ ಮಾಡಿಲ್ಲ ಎಂದು ಸಚಿವ ಯು.ಟಿ. ಖಾದರ್ ಅವರ ಆಪ್ತ ಸಹಾಯಕ ಮುಹಮ್ಮದ್ ಲಿಬ್‌ಝಿತ್ ಹೇಳಿದ್ದಾರೆ. ಅಲ್ಲದೆ, ಈ ವಿಚಾರಕ್ಕೆ ಕುರಿತಂತೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಮುನೀರ್ ಕಾಟಿಪಳ್ಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಮುನೀರ್ ಕಾಟಿಪಳ್ಳ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಆರೋಪಿಸಿರುವಂತೆ ಬಂಧಿತ ನರೇಶ್ ಶೆಣೈನನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂದು ನಮ್ಮ ಕಡೆಯಿಂದ ಯಾರೂ ಹೇಳಿಲ್ಲ. ಈ ಬಗ್ಗೆ ಜೈಲರ್‌ನಲ್ಲಿ ವಿಚಾರಿಸಿದಾಗ ಯು.ಟಿ.ಖಾದರ್ ಅವರ ಕಡೆಯಿಂದ ಯಾವುದೇ ಕರೆ ಬಂದಿಲ್ಲ ಎಂದು ಜೈಲರ್ ಕೂಡಾ ತಿಳಿಸಿದ್ದಾರೆ. ಒಂದು ವೇಳೆ ನನ್ನ ಹೆಸರು ಹೇಳಿ ಆ ರೀತಿ ಹೇಳಿದ್ದರೆ ಅದಕ್ಕೆ ಅವರೇ ಜವಾಬ್ದಾರರು. ಯಾರು ಹೇಳಿದ್ದಾರೆ ಎಂಬುದನ್ನು ಅವರೇ ಸ್ಪಷ್ಟಪಡಿಸಲಿ. ಈ ಬಗ್ಗೆ ಮುನೀರ್ ಪುರಾವೆ ಸಂಗ್ರಹಿಸಲಿ ಎಂದು ಲಿಬ್‌ಝಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News