ಕನಕಮಜಲು: ಲಾರಿ-ಬಸ್ ಢಿಕ್ಕಿ; ಚಾಲಕರಿಗೆ ಗಾಯ
Update: 2016-07-01 20:51 IST
ಸುಳ್ಯ, ಜು.1: ಕನಕಮಜಲಿನಲ್ಲಿ ಲಾರಿ ಮತ್ತು ಬಸ್ ಢಿಕ್ಕಿಯಾಗಿ ಚಾಲಕರಿಬ್ಬರು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಸುಳ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಮತ್ತು ಸುಳ್ಯಕ್ಕೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮುಖಾಮುಖಿ ಢಿಕ್ಕಿಯಾಗಿದೆ.
ಘಟನೆಯ ಪರಿಣಾಮ ಎರಡು ವಾಹನದ ಚಾಲಕರು, ನಿರ್ವಾಹಕರು ಗಾಯಗೊಂಡಿದ್ದಾರೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.