×
Ad

ಢಾಕಾದ ಆರ್ಟಿಸನ್ ರೆಸ್ಟೋರೆಂಟ್‌ನಲ್ಲಿ ಕಾರ್ಯಾಚರಣೆ ಅಂತ್ಯ;ಇಬ್ಬರು ಉಗ್ರರು ಸೆರೆ

Update: 2016-07-02 12:30 IST

ಢಾಕಾ, ಜು.2: ಢಾಕಾದ ಆರ್ಟಿಸನ್ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿರುವ ಉಗ್ರರನ್ನು ಸದೆ ಬಡಿದಿರುವ ಬಾಂಗ್ಲಾದೇಶದ ಭದ್ರತಾ ಪಡೆ ಒಟ್ಟು  ಹದಿಮೂರು ಮಂದಿ ಒತ್ತೆಯಾಳುಗನ್ನು ಉಗ್ರರ ವಶದಿಂದ ಸುರಕ್ಷಿತವಾಗಿ ಪಾರು ಮಾಡಿದ್ದಾರೆ. 
ಉಗ್ರರ ದಾಳಿಯಿಂದಾಗಿ 30 ಮಂದಿ ಗಾಯಗೊಂಡಿದ್ದಾರೆ.  ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ಆರು ಮಂದಿ ಉಗ್ರರನ್ನು ಸದೆ ಬಡಿದಿರುವ ಭದ್ರತಾ ಪಡೆ ಇಬ್ಬರನ್ನು ಜೀವಂತವಾಗಿ  ಸೆರೆ ಹಿಡಿದಿದೆ
 ಢಾಕಾದ ದೂತವಾಸ ವಲಯದಲ್ಲಿರುವ ರೆಸ್ಟೋರೆಂಟ್ ಮೇಲೆ  ಶುಕ್ರವಾರ ಉಗ್ರರು ದಾಳಿ ನಡೆಸಿ ಹಲವರನ್ನು ಒತ್ತೆಯಾಳುಗಳಾಗಿರಿಸಿದ್ದರು. ಕೂಡಲೇ ರೆಸ್ಟೋರೆಂಟ್‌ನ್ನು ಸುತ್ತುವರಿದ ನೂರಕ್ಕೂ ಅಧಿಕ ಯೋಧರು  ಕಾರ್ಯಾಚರಣೆಯ ವೇಳೆ ರೆಸ್ಟೋರೆಂಟ್ ನಲ್ಲಿ 5 ಮೃತದೇಹಗಳು ಪತ್ತೆಯಾಗಿದ್ದು. ಅವರ ಗುರುತು ಲಭ್ಯವಾಗಿಲ್ಲ.
ಭದ್ರತಾ ಪಡೆ ಯೋಧರು ಸತತ 14 ಗಂಟೆಗಳ ನಂತರ ಕಾರ್ಯಾಚರಣೆ ನಡೆಇರೆ. ಉಗ್ರರು ಒತ್ತೆ ಇರಿಸಿಕೊಂಡಿದ್ದ 18 ಮಂದಿಯನ್ನುಪಾರು ಮಾಡಿದ್ದಾರೆ. ಗಾಯಳುಗಳ ವಿವರ ಲಭ್ಯವಾಗಿಲ್ಲ.  ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು  ವಿವಿಧ  ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News