×
Ad

ಕಾಸರಗೋಡು: ಮೂವರು ಅಡಿಕೆ ಕಳ್ಳರ ಬಂಧನ

Update: 2016-07-02 15:10 IST

ಕಾಸರಗೋಡು, ಜು.2: ಅಡಿಕೆ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಕಳವು ಮಾಡುತ್ತಿದ್ದ ಮೂವರು ಕಳ್ಳರನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನೆಲ್ಲಿಕಟ್ಟೆ ಮೀನಾಡಿಪಳ್ಳದ ಅಬ್ದುರ್ರಹ್ಮಾನ್(58), ಮಂಗಳೂರು ಜೋಕಟ್ಟೆಯ ನಿವಾಸಿ ಉಮರುಲ್ ಫಾರೂಕ್(44), ಉಳ್ಳಾಲದ ಮುಹಮ್ಮದ್ ಹನೀಫ್(45) ಎಂದು ಗುರುತಿಸಲಾಗಿದೆ.

ಬದಿಯಡ್ಕ ಬಳಿಯ ಬಾರಡ್ಕ ನಿವಾಸಿ ಹಾಗೂ ಬದಿಯಡ್ಕದಲ್ಲಿ ವ್ಯಾಪಾರಿಯಾಗಿರುವ ಯೂಸಫ್ರ ಮನೆ ಬಳಿಯ ಶೆಡ್‌ನಿಂದ ಅಡಿಕೆ ಕಳವುಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಜೂ.23ರಂದು ರಾತ್ರಿ ಬದಿಯಡ್ಕಕ್ಕೆ ಇನ್ನೋವಾ ಕಾರಿನಲ್ಲಿ ಬಂದ ಈ ಮೂರು ಮಂದಿ ಬಾರಡ್ಕಕ್ಕೆ ತಲುಪಿ ಯೂಫರ ಮನೆ ಬಳಿಯ ಅಡಿಕೆ ದಾಸ್ತಾನು ಶೆಡ್‌ನ ಬೀಗ ಮುರಿದು ಕೃತ್ಯ ನಡೆಸಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News