×
Ad

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ವನ ಮಹೋತ್ಸವ

Update: 2016-07-02 16:27 IST

ಕಡಬ, ಜು.2: ಜೇಸಿಐ ಕಡಬ ಕದಂಬ ಜೂನಿಯರ್ ಜೇಸಿ ವಿಭಾಗ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಕರ್ನಾಟಕ ಅರಣ್ಯ ಇಲಾಖೆ, ಪಂಜ ವಲಯ ಹಾಗೂ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆ ಕಡಬ ಇದರ ಸಂಯುಕ್ತ ಆಶ್ರಯದಲ್ಲಿ ಸರಕಾರದ ಕೋಟಿ ವೃಕ್ಷ ಅಭಿಯಾನದಡಿಯಲ್ಲಿ ವನ ಮಹೋತ್ಸವ ಕಾರ್ಯಕ್ರಮ ’ಗೋ ಗ್ರೀನ್ ಡೇ’ ಹಾಗೂ ಮಾಹಿತಿ ಕಾರ್ಯಾಗಾರವು ಶನಿವಾರ ಕಡಬ ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಸುಬ್ರಹ್ಮಣ್ಯ ಉಪ ವಿಭಾಗ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್. ಜಗನ್ನಾಥ ಕಾರ್ಯಕ್ರಮವನ್ನು ಉದ್ಘಾಟಿಸಿ ಅರಣ್ಯ ಸಂರಕ್ಷಣೆಯ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಡಬ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಮುಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಧರ್ಮಗುರು ಫಾ. ಪೌಲ್ ಕ್ರಾಸ್ತಾ, ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ.ವರ್ಗೀಸ್, ತಾಲೂಕು ಪಂಚಾಯತ್ ಸದಸ್ಯ ಫಝಲ್ ಕೋಡಿಂಬಾಳ, ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಆಗಮಿಸಿದ್ದರು.

ವೇದಿಕೆಯಲ್ಲಿ ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ ಜೇಸಿ. ಜಯರಾಂ ಆರ್ತಿಲ, ನಿಕಟ ಪೂರ್ವಾಧ್ಯಕ್ಷ ಜೇಸಿ. ದಿನೇಶ್ ಆಚಾರ್ಯ, ಜೂನಿಯರ್ ಜೇಸಿ ಅಧ್ಯಕ್ಷ ಜೆಜೆಸಿ. ವಿಬಿನ್ ಟಿ.ಟಿ., ವಲಯಾಧಿಕಾರಿ ಜೇಸಿ. ಅಶೋಕ್ ಕುಮಾರ್ ಪಿ., ಸಂಸ್ಥೆಯ ಉಪನ್ಯಾಸಕ ಮ್ಯಾಥ್ಯೂ ಇ.ಜೆ., ಘಟಕದ ಕಾರ್ಯದರ್ಶಿ ಜೇಸಿ. ರವಿಚಂದ್ರ ಪಡುಬೆಟ್ಟು ಉಪಸ್ಥಿತರಿದ್ದರು.

ಜೂನಿಯರ್ ಜೇಸಿ ಅಧ್ಯಕ್ಷ ಜೆಜೆಸಿ. ವಿಬಿನ್ ಟಿ.ಟಿ. ಜೇಸಿ ವಾಣಿ ವಾಚಿಸಿದರು. ಘಟಕಾಧ್ಯಕ್ಷ ಜೇಸಿ. ಜಯರಾಂ ಆರ್ತಿಲ ಸ್ವಾಗತಿಸಿದರು.
ಘಟಕದ ಕಾರ್ಯದರ್ಶಿ ಜೇಸಿ. ರವಿಚಂದ್ರ ಪಡುಬೆಟ್ಟು ವಂದಿಸಿದರು. ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಜೆಎಫ್ಎಮ್ ನಾಗರಾಜ್ ಎನ್.ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News