×
Ad

ಡಿಕೆಎಂಎ ವತಿಯಿಂದ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಣೆ

Update: 2016-07-02 17:59 IST

ಮಂಗಳೂರು, ಜು.2: ದ.ಕ. ಜಿಲ್ಲೆಯ ಬಡಮತ್ತು ಮಧ್ಯಮ ವರ್ಗಕ್ಕೆ ಸೇರಿದ ಮುಸ್ಲಿಂ ಕುಟುಂಬಗಳ ಯಜಮಾನ ಅಥವಾ ದುಡಿಯುವ ವ್ಯಕ್ತಿಗಳು ಮರಣ ಹೊಂದಿದ ಸಂದರ್ಭದಲ್ಲಿ ಆ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶದಿಂದ ಸ್ಥಾಪನೆಗೊಂಡ ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಷನ್
ಸಂಸ್ಥೆಯ ವತಿಯಿಂದ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಿಸುವ ಸಮಾರಂಭವು ಶುಕ್ರವಾರ ನಡೆಯಿತು.

ನಗರದ ಫಳ್ನೀರ್‌ನ ಸ್ಟರ್ರಾಕ್ ರಸ್ತೆಯ ವೆಸ್ಟ್‌ಗೇಟ್ ಹೈಟ್ಸ್‌ನ ಮೊದಲ ಮಹಡಿಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆಎಂಎಯ ಸ್ಥಾಪಕಾಧ್ಯಕ್ಷ ಹಾಜಿ ಎಸ್.ಎಂ. ರಶೀದ್ 30 ಮಂದಿ ಫಲಾನುಭವಿಗಳಿಗೆ ಡಿಕೆಎಂಎನ ಗುರುತಿನಚೀಟಿ, ಯೆನೆಪೊಯ ಹೆಲ್ತ್‌ಕಾರ್ಡ್ ಮತ್ತು ಟಾಟಾ ಡೊಕೊಮೊ ಸಿಮ್ ಕಾರ್ಡ್‌ನ್ನು ವಿತರಿಸಿದರು.

ಈ ಸಂದರ್ಭ ಡಿಕೆಎಂಎನ ಉಪಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಸಂಘಟನಾ ಕಾರ್ಯದರ್ಶಿ ಫಾರೂಕ್ ಎಸ್.ಎಂ., ಸದಸ್ಯರಾದ ಮುಹಮ್ಮದ್ ಹಾರಿಸ್ ಮುಕ್ಕ ಸೀ ಫುಡ್, ವಿ ಹರ್ಷದ್ ಹುಸೈನ್ ವಾಮಂಜೂರ್ ಫ್ಲೈವುಡ್, ಮುಹಮ್ಮದ್ ಆಸೀಫ್ ಹೋಮ್‌ಪ್ಲಸ್, ರಿಫಾತ್ ಅಹ್ಮದ್ ಎಸ್‌ಎಂಆರ್ ಗ್ರೂಪ್, ಝುಬೇರ್ ಅಂಬರ್ ಅಂಬರ್ ಕನ್‌ಸ್ಟ್ರಕ್ಷನ್ಸ್, ಟಾಟಾ ಟೊಕೊಮೊ ಮಿಸ್ಬಾಹ್ ಕಮ್ಯುನಿಕೇಷನ್‌ನ ಮಾಲಕ ಮುಸ್ತಫಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News