ಮನಪಾ ವತಿಯಿಂದ ಮುಂದುವರಿದ ದಾಳಿ: ಪ್ಲಾಸ್ಟಿಕ್ ವಶಕ್ಕೆ
ಮಂಗಳೂರು,ಜು.2: ಪ್ಲಾಸ್ಟಿಕ್ ಬಳಕೆ ನಿಷೇಧದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹಾನಗರಪಾಲಿಕೆಯ ಆರೋಗ್ಯ ಸಮಿತಿಯ ನೇತೃತ್ವದಲ್ಲಿ ಇಂದು ಕೂಡ ದಾಳಿ ಮುಂದುವರಿದಿದೆ.
ಇಂದು ನಗರದ ಸಿಟಿಸೆಂಟರ್‌ನಲ್ಲಿರುವ ಪ್ರತಿಷ್ಠಿತ ಮಳಿಗೆಯೊಂದಕ್ಕೆ ದಾಳಿ ನಡೆಸಿದ ಮನಪಾ ಆರೋಗ್ಯ ಸ್ಥಾಯಿ ಸಮಿತಿಯ ತಂಡವು, ಮಳಿಗೆಯಲ್ಲಿದ್ದ 47 ಕೆ.ಜಿ. ಪ್ಲಾಸ್ಟಿಕನ್ನು ವಶಪಡಿಸಿಕೊಂಡಿದೆ. ಪ್ಲಾಸ್ಟಿಕ್ ಲೋಟ, ಕವರ್‌ಗಳನ್ನು ವಶಕ್ಕೆ ತೆಗೆದುಕೊಂಡು ಮಳಿಗೆಗೆ ಎಚ್ಚರಿಕೆಯನ್ನು ನೀಡಲಾಗಿದೆ.
ಕಾರ್ಯಚರಣೆಯಲ್ಲಿ ಮನಪಾ ಅಧಿಕಾರಿಗಳಾದ ಮಧು, ಶಬರಿನಾಥ್, ಯಶವಂತ್, ಕರುಣಾಕರ್, ಶ್ರೀನಿಧಿ ಭಾಗವಹಿಸಿದ್ದರು.
ಶುಕ್ರವಾರ ನಡೆದ ದಾಳಿಯಲ್ಲಿ ಬೀಗ ಹಾಕಲಾದ ಅಂಗಡಿಯವರು ಇಂದು ಟ್ರೇಡ್ ಲೈಸೆನ್ಸ್ ಪಡೆದುಕೊಂಡು ಮತ್ತೆ ಕಾರ್ಯರಂಭ ಮಾಡಿದ್ದಾರೆ. ಟ್ರೇಡ್ ಲೈಸೆನ್ಸ್ ಪಡೆಯುವಾಗ ತೆರಿಗೆಯನ್ನು ಪೂರ್ತಿ ಪಾವತಿಸುವುದು ಅಗತ್ಯವಿರುವುದರಿಂದ ಮನಪಾಗೆ ಬಾಕಿಯಿದ್ದ ತೆರಿಗೆಯೂ ವಸೂಲಾಗಿದೆ ಎಂದು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ತಿಳಿಸಿದ್ದಾರೆ.