×
Ad

ಐವನ್ ಡಿಸೋಜ ಬೆಂಬಲಿಗರಿಂದ ಸಂಭ್ರಮಾಚರಣೆ

Update: 2016-07-02 20:45 IST

ಮಂಗಳೂರು,ಜು.2:ರಾಜ್ಯದ ವಿಧಾನ ಪರಿಷತ್‌ನಲ್ಲಿ ಆರ್.ವಿ.ವೆಂಕಟೇಶ್ ನಿವೃತ್ತಿಯಿಂದ ತೆರವಾಗಿರುವ ಮುಖ್ಯ ಸಚೇತಕ ಹುದ್ದೆಗೆ ಪರಿಷತ್‌ನ ನಾಮಕರಣ ಸದಸ್ಯ ಐವನ್ ಡಿಸೋಜ ಇಂದು ಆಯ್ಕೆಗೊಂಡ ಪ್ರಯುಕ್ತ ಮಂಗಳೂರಿನಲ್ಲಿ ಅವರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.

ನಗರದ ವೆಲೆನ್ಸಿಯಾ ವೃತ್ತದ ಬಳಿ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರಾದ ನಾಗೇಂದ್ರ ಕುಮಾರ್, ಮನುರಾಜ್.ಎನ್.ಪಿ, ಮಹೇಶ್, ಮಿಥುನ್ ರೈ, ಸೀತಾರಾಮ ಶೆಟ್ಟಿ, ಉಮ್ಮರಬ್ಬ, ಗಿರೀಶ್ ಶೆಟ್ಟಿ, ಪ್ರೇಮ ಬಲ್ಲಾಳ್ ಬಾಗ್, ಸ್ಟೀಫನ್, ಸತೀಶ್ ಪೆಂಗಾಲ್, ಅಶೀಶ್ ಪಿರೇರಾ, ಸುಧೀರ್ ಕಡಕಾರ್, ರಫೀಕ್, ಮೋಹನ್ ಕೊಪ್ಪಳ, ಬಿ.ಎಸ್.ಹಸನಬ್ಬ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News