ದಬಾಂಗ್ ದಿಲ್ಲಿ , ಪುನೇರಿಗೆ ಜಯ

Update: 2016-07-02 18:11 GMT

ಜೈಪುರ,ಜು.2: ಇಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಮೆಂಟ್‌ನ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಮತ್ತು ಪುನೇರಿ ಪಲ್ಟಾನ್ ಜಯ ಗಳಿಸಿದೆ.
13ನೆ ಪಂದ್ಯದಲ್ಲಿ ದಬಾಂಗ್ ತಂಡ ಬೆಂಗಳೂರು ಬುಲ್ಸ್ ವಿರುದ್ಧ 8 ಅಂಕಗಳ ಅಂತರದಲ್ಲಿ ಜಯ ಗಳಿಸಿತು. ದಬಾಂಗ್ ತಂಡ 32 ಮತ್ತು ಬೆಂಗಳೂರು 24 ಪಾಯಿಂಟ್ ಗಳಿಸಿತು.
  ಟೂರ್ನಮೆಂಟ್‌ನ 14ನೆ ಪಂದ್ಯದಲ್ಲಿ ಪುನೇರಿ ಪಲ್ಟಾನ್ ತಂಡ ಜೈಪುರ ಪಿಂಕಿ ಪ್ಯಾಂಥರ್ಸ್‌ ವಿರುದ್ಧ 5 ಪಾಯಿಂಟ್‌ಗಳ ಅಂತರದಿಂದ ಜಯ ಸಾಧಿಸಿತು. ಪುನೇರಿ 33 ಮತ್ತು ಜೈಪುರ ಪಾಯಿಂಟ್ ಅಂಕ ಗಳಿಸಿತು.
 ಇದರೊಂದಿಗೆ ಪುನೇರಿ ಪಲ್ಟಾನ್ ತಂಡ ಆಡಿರುವ 5 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ 17 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜೈಪುರ 5 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ 15 ಅಂಕ ಪಡೆದು ಎರಡನೆ ಸ್ಥಾನ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News