×
Ad

ಜು.6ರಂದು ಈದ್ ಸೌಹಾರ್ದ ಕೂಟ

Update: 2016-07-02 23:48 IST

ಉಡುಪಿ, ಜು.2: ಉದ್ಯಾವರ ಹಾಗೂ ಉಡುಪಿ ಸೌಹಾರ್ದ ಸಮಿತಿ, ಲಯನ್ಸ್, ಲಯನೆಸ್ ಮತ್ತು ಲಿಯೋ ಕ್ಲಬ್ಸ್ ಉಡುಪಿ- ಇಂದ್ರಾಳಿ, ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಈದ್ ಸೌಹಾರ್ದ ಕೂಟವನ್ನು ಜು.6ರಂದು ಸಂಜೆ 6:30ಕ್ಕೆ ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಲೇವಿಯರ್ ಚರ್ಚ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸಲಿ ರುವರು. ಯಾಸೀನ್ ಮಲ್ಪೆ ಪ್ರಮುಖ ಭಾಷಣ ಮಾಡಲಿರು ವರು ಎಂದು ಸಮಿತಿಯ ಸಂಚಾಲಕ ಅಲ್ಫೋನ್ಸ್ ಡಿಕೋಸ್ಟಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಅಖಿಲ ಭಾರತ ತುಳುಕೂಟದ ಉಪಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ವಲಯದ ಪ್ರಧಾನ ಧರ್ಮಗುರು ರೆ.ಫಾ.ಫ್ರೆಡ್ ಮಸ್ಕರೇನಸ್, ಉದ್ಯಾವರ ಚರ್ಚ್‌ನ ಧರ್ಮಗುರು ವಂ.ಡಾ.ರೋಕ್ ಡಿಸೋಜ, ಉದ್ಯಾವರ ಜಾಮಿಯ ಮಸೀದಿಯ ವೌಲಾನ ಅಬ್ದುಲ್ ರಶೀದ್ ರೆಹಮಾನಿಯಾ, ಉದ್ಯಮಿ ಎಫ್.ಎಂ.ಯಅ್ಕೂಬ್ ಭಾಗವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಇಂದ್ರಾಳಿ ರೋಟರಿ ಕ್ಲಬ್‌ನ ಅಧ್ಯಕ್ಷ ಮುಹಮ್ಮದ್ ವೌಲಾ, ಉದ್ಯಾವರ ಸಮಿತಿಯ ಅಧ್ಯಕ್ಷ ರಫಾಯಲ್ ಮೊನಿಸ್, ವೇದಿಕೆಯ ಕಾರ್ಯದರ್ಶಿ ಲೂವಿಸ್ ಡಿ ಅಲ್ಮೇಡಾ, ಜಾರ್ಜ್ ಸ್ಯಾಮುವೆಲ್, ರಿಯಾಝ್ ಪಳ್ಳಿ, ಲಾರೆನ್ಸ್ ಡೇಸಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News