×
Ad

ಛಾಯಾಗ್ರಾಹಕರಿಂದ ಬಂದ್: ಉಡುಪಿಯಲ್ಲಿ ಧರಣಿ

Update: 2016-07-02 23:50 IST

ಉಡುಪಿ, ಜು.2: ಫೋಟೊಗ್ರಾಫರ್‌ಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ನೀಡಿರುವ ಬಂದ್ ಕರೆಯ ಹಿನ್ನೆಲೆಯಲ್ಲಿ ಸೌತ್ ಕೆನರಾ ಫೋಟೊಗ್ರಾಫರ್ಸ್‌ ಅಸೋಸಿಯೆಶನ್‌ನ ಜಿಲ್ಲಾ ಘಟಕ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಧರಣಿ ನಡೆಸಿತು. ಛಾಯಾಗ್ರಾಹಕ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತ್ಯೇಕ ಅಕಾಡಮಿ ಸ್ಥಾಪಿಸಬೇಕು. ಸರಕಾರಿ ಗುರುತಿನ ಚೀಟಿಗಳಿಗೆ ಸ್ಟುಡಿಯೋದಲ್ಲಿ ತೆಗೆಯುವ ಸ್ಪಷ್ಟ ಭಾವಚಿತ್ರಗಳನ್ನು ಬಳಸಿಕೊಳ್ಳಬೇಕು. ಸರಕಾರಿ ಕಾರ್ಯಕ್ರಮಗಳಿಗೆ ವೀಡಿಯೊ ಮತ್ತು ಚಿತ್ರಗಳನ್ನು ತೆಗೆಯಲು ಹೊರಗುತ್ತಿಗೆ ಕೊಡುವುದರ ಬದಲು ಸ್ಥಳೀಯರಿಗೆ ಅವಕಾಶ ಕೊಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ನಿಕಟಪೂರ್ವ ಅಧ್ಯಕ್ಷ ವಾಸುದೇವ ರಾವ್, ಛಾಯಾಚಿತ್ರಗ್ರಾಹಕರು ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದು, ಇವರಿಗೆ ಜೀವವಿಮೆ, ಆರೋಗ್ಯ ವಿಮೆ, ಇಎಸ್‌ಐ, ಪಿಂಚಣಿ ಯೋಜನೆ ಯಡಿಯಲ್ಲಿ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಫೋಟೊಗ್ರಾಫರ್ಸ್‌ ಅಸೋಸಿಯೆಶನ್ ನಿರ್ದೇಶಕ ಆಸ್ಟ್ರೋ ಮೋಹನ್, ಎಸ್‌ಕೆಪಿಎ ವಲಯಾಧ್ಯಕ್ಷ ವಾಮನ ಕೊಡವೂರು, ಪದಾಧಿಕಾರಿಗಳಾದ ಜನಾರ್ದನ್ ಕೊಡವೂರು, ಶ್ರೀಧರ್ ಶೆಟ್ಟಿಗಾರ್, ಪ್ರಮೋದ್ ಕಾಪು ಮೊದಲಾದವರು ಉಪಸ್ಥಿತರಿದ್ದರು.

ಕಾಪುನಿಂದ ಬೈಕ್‌ರ್ಯಾಲಿ ನಡೆಸಿದ ಛಾಯಾಚಿತ್ರಗ್ರಾಹಕರು ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News