ಶಾರ್ಜಾದಲ್ಲಿ ಅಪಘಾತ: ಕಾಸರಗೋಡಿನ ಯುವಕ ಮೃತ್ಯು
Update: 2016-07-02 23:51 IST
ಕಾಸರಗೋಡು, ಜು.2: ಶಾರ್ಜಾದಲ್ಲಿ ನಡೆದ ಅಪಘಾತದಲ್ಲಿ ಕಾಸರಗೋಡು ಪೊಯಿನಾಚಿ ನಿವಾಸಿಯೊಬ್ಬರು ಮೃತಪಟ್ಟು, ಕುಂಬಳೆ ನಿವಾಸಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಮೃತಪಟ್ಟವರನ್ನು ಪೊಯಿನಾಚಿ ಚೆರುಕರೆಯ ಮುಹಮ್ಮದ್ ಕುಂಞಿ (32) ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ಕುಂಬಳೆಯ ಸಾದಿಕ್ ಎಂಬವರು ಗಾಯಗೊಂಡಿದ್ದಾರೆ.
ಪಿಕಪ್ ವ್ಯಾನ್‌ಗೆ ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸುಮಾರು 12 ವರ್ಷಗಳಿಂದ ಗಲ್ಫ್ನಲ್ಲಿ ಕೆಲಸ ಮಾಡುತ್ತಿದ್ದ ಮುಹಮ್ಮದ್ ಕುಂಞಿ ಆರು ತಿಂಗಳ ಹಿಂದೆ ಊರಿಗೆ ಬಂದು ಮತ್ತೆ ವಿದೇಶಕ್ಕೆ ಮರಳಿದ್ದರು.