ಯುವತಿ ನಾಪತ್ತೆ
Update: 2016-07-02 23:54 IST
ಬಂಟ್ವಾಳ, ಜು. 2: ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೈನಾಡುವಿನ ಬೇಕರಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ನೋಣಯ್ಯ ಗೌಡ ಎಂಬವರ ಪುತ್ರಿ ಜಯಶ್ರೀ (20) ನಾಪತ್ತೆಯಾದ ಯುವತಿ. ಸುಮಾರು 2 ವರ್ಷಗಳಿಂದ ನೈನಾಡುವಿನ ಬೇಕರಿಯೊಂದರಲ್ಲಿ ಕೆಲಸಕ್ಕಿದ್ದ ಈಕೆ ಜೂ.26ರಂದು ಮನೆಗೆ ಹೋಗಿ ಬರುತ್ತೇನೆಂದು ತೆರಳಿದ್ದವಳು ನಾಪತ್ತೆಯಾಗಿದ್ದಾಳೆ. ಈಕೆಯ ಮೊಬೈಲ್ ಸ್ವಿಚ್ಡ್‌ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.