ಜೋರ್ಡಾನ್ ಗಡಿಯಲ್ಲಿ 30,000 ಮಕ್ಕಳು ಹಸಿವಿನ ತೆಕ್ಕೆಯಲ್ಲಿ

Update: 2016-07-03 07:44 GMT

 ಅಮ್ಮಾನ್,ಜುಲೈ 3: 30,000ಮಕ್ಕಳ ಸಹಿತ 70,000 ಸಿರಿಯನ್ ನಿರಾಶ್ರಿತರು ಜೋರ್ಡಾನ್ ಗಡಿಯ ನಿರಾಶ್ರಿತ ಕ್ಯಾಂಪ್‌ನಲ್ಲಿ ಹಸಿವಿನಿಂದ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ. ರಮಝಾನ್‌ನಲ್ಲಿ ಕೂಡಾ ಇವರಿಗೆ ಜೀವನಾವಶ್ಯಕವಾದ ನೀರು ಆಹಾರ ಮದ್ದುಗಳು ಲಭಿಸದ ದಾರಣ ಸ್ಥಿತಿಯಿದೆ ಎಂದು ವರದಿಗಳು ತಿಳಿಸಿವೆ.ಕಳೆದ ತಿಂಗಳುಐಸಿಸ್ ಭಯೋತ್ಪಾದಕರ ಆಕ್ರಮಣದಿಂದಾಗಿ ಜೋರ್ಡಾನ್ ಅಧಿಕಾರಿಗಳು ಸಿರಿಯಾದ ಗಡಿಯನ್ನು ಮುಚ್ಚಿದ್ದರಿಂದ ಈ ಮನುಷ್ಯ ಸಮೂಹ ಸಂಕಷ್ಟದಿಂದ ತಳಮಳಿಸುವಂತೆ ಆಗಿದೆ. ಗಡಿಮುಚ್ಚಿದ್ದರಿಂದ ಸ್ವಯಂಸೇವಾ ಸಂಸ್ಥೆಗಳಿಗೆ ಅಗತ್ಯವಸ್ತುಗಳನ್ನು ಇಲ್ಲಿಗೆ ತಲುಪಿಸಲು ಸಾಧ್ಯವಿಲ್ಲದಾಯಿತು.ಇಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ಸುಧೀರ್ಘವಿರುವ ಉಪವಾಸ ತೊರೆಯುವುದಕ್ಕೂ ನೀರು ಸಿಗದಂತಹ ಪರಿಸ್ಥಿತಿಯಿದೆ. ಐಸಿಸ್ ದಾಳಿ ನಡೆದ ಕೂಡಲೆ ಗಡಿಯ ಸ್ವಲ್ಪಭಾಗವನ್ನು ಮುಚ್ಚಲಾಗಿತ್ತು. ಶಿಬಿರದ ಸುಡು ಬಿಸಿಲಿಗೆಮಕ್ಕಳುಮಹಿಳೆಯರು ಚಡಪಡಿಸುತ್ತಿದ್ದಾರೆ. ಇಲ್ಲಿರುವ ಮಕ್ಕಳಲ್ಲಿ ಐದು ವಯಸ್ಸಿಗಿಂತ ಕೆಳಗಿನ 1300 ಮಂದಿ ಇದ್ದಾರೆ. ಸರಿಯಾಗಿ ಆಹಾರವಿಲ್ಲದ್ದರಿಂದ ಇವರಲ್ಲಿ ಪೊಷಕಾಹಾರದಕೊರತೆಗೀಡಾಗಿದ್ದಾರೆ. ವಿಶ್ವಸಂಸ್ಥೆಯ ನೇತೃತ್ವದಲ್ಲಿ ಜೋರ್ಡಾನ್‌ನಲ್ಲಿ 6,50,000 ಸಿರಿಯನ್ ನಿರಾಶ್ರಿತರು ನೋಂದಾಯಿಸಿಕೊಂಡಿದ್ದಾರೆ.ನಿರಾಶ್ರಿತರನ್ನು ಸ್ವೀಕರಿಸಿ ಅವರನ್ನು ಈರೀತಿ ಕಷ್ಟಕ್ಕೊಡುತ್ತಿರುವ ಏಕೈಕ ರಾಷ್ಟ್ರ ಜೋರ್ಡಾನ್ ಆಗಿದೆ ಎಂದುಅಲ್‌ಜಝೀರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News