ಉಳ್ಳಾಲ: ಎಸ್ಸೆಸ್ಸೆಫ್ ವತಿಯಿಂದ ಮಾದಕ ದ್ರವ್ಯ ನಿರ್ಮೂಲನೆ ಚರ್ಚಾಕೂಟ
ಉಳ್ಳಾಲ, ಜು.3: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವ್ಯಾಪ್ತಿಯ ವಿವಿಧ ಕಾಲೇಜು ಕ್ಯಾಂಪಸ್ ಮತ್ತು ಸುನ್ನೀ ಬಾಲ ಸಂಘ, ಎಸ್‌ಬಿಎಸ್ ಉಳ್ಳಾಲ ವಲಯ ಇದರ ವತಿಯಿಂದ ಮಾದಕ ದ್ರವ್ಯಗಳತ್ತ ಆಕರ್ಷಿತರಾಗುತ್ತಿರುವ ವಿದ್ಯಾರ್ಥಿಗಳು ಎಂಬ ವಿಷಯದಲ್ಲಿ ಚರ್ಚಾಕೂಟ ಮತ್ತು ಇಫ್ತಾರ್ ಸಂಗಮ ಕಾರ್ಯಕ್ರಮ ನಗರಸಭಾ ಸಮುದಾಯ ಭವನದಲ್ಲಿ ಜರಗಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ತ್ವಾಹಾ ಕೋಟೆಪುರ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮ ಮುಖ್ಯಸ್ಥ ವೌಲಾನಾ ಅಬೂಪಹದ್ ಹಸನ್ ಅಮ್ಜದಿ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.
ಅಖಿಲ ಭಾರತ ಬ್ಯಾರಿ ಪರಿಷತ್ ಶಿಕ್ಷಣ ಕಾರ್ಯದರ್ಶಿ ಅಡ್ವೊಕೇಟ್ ಯೂಸುಫ್ ವಕ್ತಾರ್ ಉದ್ಘಾಟಿಸಿ, ಕ್ಯಾಂಪಸ್ ಹೊರಗಿನ ಪರಿಸರ ಮತ್ತು ಕೆಲವು ಸ್ನೇಹಿತರು ಮಾದಕ ವಸ್ತುಗಳತ್ತ ತಮ್ಮ ಸ್ನೇಹಿತರನ್ನು ಮತ್ತು ಶಾಲಾ ವಿದ್ಯಾರ್ಥಿಗಳನ್ನು ಆಕರ್ಷಿತಗೊಳಿಸುತ್ತಿದ್ದು ಇದಕ್ಕೆ ವಿದ್ಯಾರ್ಥಿ ಮಿತ್ರರಿಂದಲೇ ತಿಳಿವಳಿಕೆ ನೀಡಬೇಕು ಮತ್ತು ನಾಡಿನ ರಾಜಕೀಯ, ಧಾರ್ಮಿಕ ಮತ್ತು ಪೊಲೀಸ್ ಇಲಾಖೆ ಸಹಕರಿಸಿ ಉಳ್ಳಾಲವನ್ನು ಮಾದಕ ವಸ್ತು ಮುಕ್ತ ವಲಯವನ್ನಾಗಿ ಮಾಡಬೇಕೆಂದು ಹೇಳಿದರು.
ದಕ್ಷಿಣ ವಲಯ ಉಪ ಪೊಲೀಸ್ ಆಯುಕ್ತ ಕಲ್ಯಾಣ್ ಶೆಟ್ಟಿ ಶುಭ ಹಾರೈಸಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸೈಯದ್ ಖುಬೈಬ್ ತಂಙಳ್, ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಕೋಶಾಧಿಕಾರಿ ಇಲ್ಯಾಸ್ ಕೈಕೋ, ಕಾರ್ಯಕಾರಿ ಸಮಿತಿ ಸದಸ್ಯ ಹನೀಫ್ ಬೊಟ್ಟು, ತೊಕ್ಕೊಟ್ಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ, ತೊಕ್ಕೊಟ್ಟು ವಲಯ ಎಸ್‌ಬಿಎಸ್ ಮುಖ್ಯಸ್ಥ ಫಾಝಿಲ್ ಅಳೇಕಲ ಮತ್ತು ಉಳ್ಳಾಲದ ಯುವ ಪ್ರಮುಖರು ಅತಿಥಿಗಳಾಗಿ ಅಗಮಿಸಿದ್ದರು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಸ್ವಾಗತಿಸಿದರು. ಎಸ್‌ಬಿಎಸ್ ಅಧ್ಯಕ್ಷ ಇಸ್ಮಾಯೀಲ್ ಮುಹಾಝ್ ಮೇಲಂಗಡಿ ವಂದಿಸಿದರು.