ಕಾಸರಗೋಡು: ಡೆಂಗ್‌ಗೆ ಯುವಕ ಬಲಿ

Update: 2016-07-03 12:36 GMT

ಕಾಸರಗೋಡು, ಜು.3: ಜಿಲ್ಲೆಯಲ್ಲಿ ಮಳೆಯ ಜೊತೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಡೆಂಗ್‌ನಿಂದ ಯುವಕನೋರ್ವ ಮೃತಪಟ್ಟ ಘಟನೆ ಬಂದಡ್ಕದಲ್ಲಿ ನಡೆದಿದೆ.

ಬಂದಡ್ಕ ಇಲ್ಲತುಂಗಾಲಿನ ವಸಂತ ನಾಯ್ಕ (26) ಮೃತಪಟ್ಟ ಯುವಕ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ಬಂದಡ್ಕ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಡೆಂಗ್ ಹಾವಳಿ ತೀವ್ರಗೊಂಡಿದೆ. ನೂರಾರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News