ಹರ್ಯಾಣದ ಶಾಲೆಗಳಲ್ಲಿ ಧಾರ್ಮಿಕ ಪಠ್ಯ ಪುಸ್ತಕ !

Update: 2016-07-03 14:25 GMT

ಚಂಡಿಗಡ, ಜು.3: ಹರ್ಯಾಣದಲ್ಲಿ ಈ ತಿಂಗಳಿಂದ ಸರಕಾರಿ ಶಾಲೆಗಳ ಪಠ್ಯದಲ್ಲಿ ವಿವಿಧ ಧರ್ಮಗಳ ಪವಿತ್ರ ಗ್ರಂಥಗಳಿಂದ ಪಾಠಗಳನ್ನು ಅಳವಡಿಸಲಾಗುವುದೆಂದು ಸಚಿವರೊಬ್ಬರು ಇಂದು ತಿಳಿಸಿದ್ದಾರೆ.
ಭಗವದ್ಗೀತೇ (ಹಿಂದೂ), ಕುರ್‌ಆನ್ (ಇಸ್ಲಾಂ), ಬೈಬಲ್ (ಕ್ರೈಸ್ತ) ಹಾಗೂ ಗುರುಗ್ರಂಥ ಸಾಹೀಬ (ಸಿಖ್)ಗಳಿಂದ ಧಾರ್ಮಿಕ ಪಠ್ಯಗಳನ್ನೊಳಗೊಂಡ ನೈತಿಕ ಶಿಕ್ಷಣದ ವಿಷಯವನ್ನು ಜು.5ರಂದು ಕುರುಕ್ಷೇತ್ರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಪರಿಚಯಿಸಲಾಗುವುದು. 6ರಿಂದ 12ನೆ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವು ಒಂದು ಪಠ್ಯವಾಗಲಿದೆಯೆಂದು ಹರ್ಯಾಣದ ಶಿಕ್ಷಣ ಸಚಿವ ರಾಂವಿಲಾಸ್ ಶರ್ಮ ಹೇಳಿದ್ದಾರೆ.
ಸಾಮಾಜಿಕ ಸಂಘಟನೆಗಳು ಹಾಗೂ ಶಿಕ್ಷಣ ತಜ್ಞರ ಸಹಯೋಗದೊಂದಿಗೆ ರಾಜ್ಯ ಸರಕಾರವು ಈ ಪಠ್ಯವನ್ನು ಸಿದ್ಧಗೊಳಿಸಿದೆಯೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News