ಕೆರೆಗೆ ಬಿದ್ದು ಕೃಷಿಕ ಮೃತ್ಯು
Update: 2016-07-03 23:48 IST
ಕೋಟ, ಜು.3: ಕೆದೂರು ಗ್ರಾಮದ ಶಾನಾಡಿ ಎಂಬಲ್ಲಿ ಕೆರೆಗೆ ಬಿದ್ದು ಕೃಷಿಕರೊಬ್ಬರು ಮೃತಪಟ್ಟ ಘಟನೆ ಜು.2ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕೊರ್ಗಿಯ ನಾರಾಯಣ ಶೆಟ್ಟಿ (79) ಎಂದು ಗುರುತಿಸಲಾಗಿದೆ. ಕೃಷಿ ಕೆಲಸ ಮಾಡುತ್ತಿದ್ದ ಇವರು ಗದ್ದೆಯ ಅಂಚಿನಲ್ಲಿರುವ ದೇವರ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.