ವಾಹನ ಕಳವು
Update: 2016-07-03 23:49 IST
ಉಡುಪಿ, ಜು.3: ಉದ್ಯಾವರ ಬಲಾಯಿಪಾದೆ ಬಳಿಯ ವರ್ಕ್‌ಶಾಪ್‌ನಲ್ಲಿ ನಿಲ್ಲಿಸಿದ್ದ ಹೊಸ ಫೋರ್ಸ್ ಡೆಲಿವರಿ ವಾಹನ ಕಳವಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರದ ಅಜೀಮ್ ಎಂಬವರು ಮಂಗಳೂರಿನ ಫೋರ್ಸ್ ಕಂಪೆನಿಯಿಂದ ಖರೀದಿಸಿದ್ದ ಹೊಸ ಫೋರ್ಸ್ ಡೆಲಿವರಿ ವಾಹನವನ್ನು ಬಲಾಯಿ ಪಾದೆಯ ಕಾಳಿಕಾಂಬ ಬಾಡಿ ಬಿಲ್ಡರ್ಸ್‌ನಲ್ಲಿ ಪೈಂಟ್ ಹಚ್ಚಿಸಲು ಜು.1ರಂದು ನಿಲ್ಲಿಸಿ ಕೀಯನ್ನು ವರ್ಕ್‌ಶಾಪ್ ಮಾಲಕ ನಾಗರಾಜರಲ್ಲಿ ನೀಡಿದ್ದರು. ಸುಮಾರು 8,02,000 ರೂ. ವೌಲ್ಯದ ಈ ವಾಹನ ಜು.1ರಂದು ರಾತ್ರಿ ವೇಳೆ ಕಳವಾಗಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.