ಪಡುಬಿದ್ರೆ: ಆರೋಗ್ಯ ರಕ್ಷಾ ಸಮಿತಿ ಸಭೆ
ಪಡುಬಿದ್ರೆ, ಜು.3: ಬೃಹತ್ ಉದ್ದಿಮೆಗಳಿಂದ ಬೆಳೆಯುತ್ತಿರುವ ಪಡುಬಿದ್ರೆಯ ಆರೋಗ್ಯ ಕೇಂದ್ರವನ್ನು ಸಮುದಾಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಪಡುಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಪಡುಬಿದ್ರೆ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರೆ, ತಾಪಂ ಸದಸ್ಯರಾದ ರೇಣುಕಾ ಪುತ್ರನ್ ಹೆಜಮಾಡಿ, ನೀತಾ ಗುರುರಾಜ್ ಪಡುಬಿದ್ರೆ, ದಿನೇಶ್ ಕೋಟ್ಯಾನ್ ಪಲಿಮಾರು, ಕೇಶವ ಮೊಯ್ಲಿ ಎರ್ಮಾಳು, ಯು.ಸಿ. ಶೇಕಬ್ಬ ಉಚ್ಚಿಲ, ಗ್ರಾಪಂ ಅಧ್ಯಕ್ಷರಾದ ಅರುಣಾ ಕುಮಾರಿ ಎರ್ಮಾಳು, ನಾಗರತ್ನ ಕರ್ಕೇರ ಉಚ್ಚಿಲ, ವಿಶಾಲಾಕ್ಷಿ ಪುತ್ರನ್ ಹೆಜಮಾಡಿ, ಮುಖಂಡರಾದ ನವೀನ್‌ಚಂದ್ರ ಜೆ. ಶೆಟ್ಟಿ, ವೈ, ಸುಧೀರ್ ಕುಮಾರ್, ವಿಜಯ ಎಂ. ಅಮೀನ್, ವೈ. ಸುಕುಮಾರ್, ನವೀನ್ ಎನ್.ಶೆಟ್ಟಿ, ದಿವಾಕರ ಶೆಟ್ಟಿ, ಅಶೋಕ್ ಸಾಲ್ಯಾನ್, ರವೀಂದ್ರ, ಬುಡಾನ್ ಸಾಹೇಬ್, ವಿಜಯಲಕ್ಷ್ಮೀ ನಾಯಕ್, ಅಜ್ಮತ್ ಆಲಿ ಉಪಸ್ಥಿತರಿದ್ದರು. ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಬಿ.ಬಿ.ರಾವ್ ಕಾರ್ಯಕ್ರಮ ನಿರೂಪಿಸಿದರು.