×
Ad

ವಿದೇಶಗಳಲ್ಲಿ ಸಾಂಪ್ರದಾಯಿಕ ಉಡುಪು ಧರಿಸದಂತೆ ಪ್ರಜೆಗಳಿಗೆ ಯುಎಇ ಎಚ್ಚರಿಕೆ

Update: 2016-07-03 23:57 IST

ದುಬೈ,ಜು.3: ಬೇಸಿಗೆಯ ವೇಳೆ ಯುರೋಪ್‌ಗೆ ಭೇಟಿ ನೀಡುವ ಯುಎಇ ಪ್ರಜೆಗಳು ತಮ್ಮ ಸುರಕ್ಷತೆಯ ದೃಷ್ಟಿಯಿಂದ, ಅಲ್ಲಿನ ಕೆಲವು ದೇಶಗಳಲ್ಲಿರುವ ಬುರ್ಖಾ ನಿಷೇಧದ ನಿಯಮಗಳನ್ನು ಪಾಲಿಸಬೇಕು ಹಾಗೂ ತಮ್ಮ ಜೊತೆ ದೊಡ್ಡ ಮೊತ್ತದ ನಗದನ್ನು ಕೊಂಡೊಯ್ಯಬಾರದೆಂದು ಯುಎಇನ ವಿದೇಶಾಂಗ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ ಇಲಾಖೆಯು ಸೂಚನೆೆ ನೀಡಿದೆ.

ವಿದೇಶಗಳಿಗೆ ಪ್ರಯಾಣಿಸುವಾಗ ಯುಎಇನ ಪುರುಷರು ಭದ್ರತಾ ಕಾರಣಗಳಿಗಾಗಿ ತಮ್ಮ ಸಾಂಪ್ರದಾಯಿಕ ಉಡುಪನ್ನು ಸಾರ್ವಜನಿಕ ಸ್ಥಳಗಳಲ್ಲಿ ಧರಿಸಕೂಡದೆಂದು ಇಲಾಖೆ ಸಲಹೆ ನೀಡಿದೆ. ಅಮೆರಿಕದ ಒಹಿಯೊ ರಾಜ್ಯದ ಆವೊನ್ ನಗರದಲ್ಲಿ, ಪೊಲೀಸರು ಎಮಿರೇಟ್ ಪ್ರಜೆ ಯೊಬ್ಬನನ್ನು ಐಸಿಸ್ ಸದಸ್ಯನೆಂದು ತಪ್ಪಾಗಿ ಭಾವಿಸಿ ಬಂಧಿಸಿದ್ದಾರೆಂಬ ವರದಿಗಳ ಹಿನ್ನೆಲೆಯಲ್ಲಿ ಯುಎಇನ ವಿದೇಶಾಂಗ ಸಚಿವಾಲಯ ತನ್ನ ನಾಗರಿಕರಿಗೆ ಹಲವಾರು 'ಪ್ರಯಾಣ ಎಚ್ಚರಿಕೆ'ಗಳನ್ನು ಜಾರಿಗೊಳಿಸಿದೆ.'' ಕೆಲವು ಯುರೋಪಿಯನ್ ದೇಶಗಳು, ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಿದೆ. ಒಂದು ವೇಳೆ ಎಮಿರೇಟ್ ಪ್ರಜೆಗಳು ಈ ದೇಶಗಳನ್ನು ಸಂದರ್ಶಿಸಲಿಕ್ಕಿದ್ದರೆ, ಅವರು ದಂಡ ಅಥವಾ ಕಾನೂನುಕ್ರಮಗಳಿಂದ ಪಾರಾಗಲು, ಈ ನಿಯಮಗಳನ್ನು ಪಾಲಿಸಬೇಕೆಂದು ಬಲವಾಗಿ ಶಿಫಾರಸು ಮಾಡಲಾಗಿದೆ'' ಎಂದು ವಿದೇಶಾಂಗ ಇಲಾಖೆಯ ಕಾನ್ಸುಲರ್ ವ್ಯವಹಾರಗಳ ಸಹಾಯಕ ಆಧೀನ ಕಾರ್ಯದರ್ಶಿ ಅಲ್ ದಹೇರಿ ತಿಳಿಸಿದ್ದಾರೆ.

ಫ್ರಾನ್ಸ್, ಬೆಲ್ಜಿಯಂ, ಡನ್ಮಾರ್ಕ್, ನೆದರ್ಲ್ಯಾಂಡ್ಸ್ ದೇಶಗಳಲ್ಲಿ ಹಾಗೂ ್ಪಸೇನ್‌ನ ಬಾರ್ಸೆಲೋನಾ ಸಹಿತ ಕೆಲವು ಯುರೋಪಿಯನ್ ನಗರಗಳಲ್ಲಿ ಬುರ್ಖಾವನ್ನು ನಿಷೇಧಿಸಲಾಗಿದೆ. ಈ ದೇಶಗಳಲ್ಲಿ ಯಾವುದೇ ರೀತಿಯಲ್ಲಿ ಮುಖವನ್ನು ಮರೆಮಾಚುವುದನ್ನು ಕಡ್ಡಾಯವಾಗಿ ನಿಷೇಧಿ ಸಲಾಗಿದೆ. ಜರ್ಮನಿಯ ಹೆಸ್ಸೆ ರಾಜ್ಯ ಹಾಗೂ ಇಟಲಿಯ ಹಲವು ರಾಜ್ಯಗಳು ಕೂಡಾ ಬುರ್ಖಾ ನಿಷೇದಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News