×
Ad

ವೆನ್ಲಾಕ್‌ನಲ್ಲಿ ಆಯುರ್ವೇದ,

Update: 2016-07-03 23:57 IST

ಮಂಗಳೂರು, ಜು.3: ಭಾರತೀಯ ವೈದ್ಯಪದ್ಧತಿಗಳು ಮತ್ತು ಹೋಮಿಯೋಪತಿ (ಆಯುಷ್) ಪದ್ಧತಿಗಳನ್ನು ಪ್ರಧಾನವಾಹಿನಿಗೆ ತಂದು ಸಾರ್ವಜನಿಕರಿಗೆ ಅವುಗಳ ಸಂಪೂರ್ಣ ಪ್ರಯೋಜನವನ್ನು ತಲುಪಿಸುವ ಸರಕಾರದ ಕಾರ್ಯಕ್ರಮದನ್ವಯ ದ.ಕ. ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆಯುಷ್ ಪದ್ಧತಿಗಳ ಬಗ್ಗೆ ಜನರು ಹೆಚ್ಚಿನಒಲವು ವ್ಯಕ್ತಪಡಿಸುತ್ತಿದ್ದು ವೆನ್ಲಾಕ್ ಆಸ್ಪತ್ರೆಯಲ್ಲಿ ಆಯುಷ್ ಸ್ಪೆಷಾಲಿಟಿ ಕ್ಲಿನಿಕ್ ತೆರೆಯಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಸರಕಾರವು 2015-16ನೆ ಸಾಲಿನಲ್ಲಿ 50 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆಯನ್ನು ತೆರೆಯಲು ಮಂಜೂರಾತಿ ನೀಡಿದೆ. ಅದರಂತೆ ಆಯುಷ್ ಇಲಾಖೆ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಸ್ಪೆಷಾಲಿಟಿ ಕ್ಲಿನಿಕ್‌ಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಜನರಿಗೆ ಹೆಚ್ಚಿನ ಆಯುಷ್ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಖಾಸಗಿ ಆಯುಷ್ ಕಾಲೇಜುಗಳಾದ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ತಜ್ಞ ವೈದ್ಯರಿಂದ ಸ್ತ್ರೀರೋಗ, ಮಕ್ಕಳ ವಿಭಾಗ, ವೈದ್ಯಕೀಯ ಮತ್ತು ನರರೋಗ ವಿಭಾಗ ಪ್ರಾರಂಭಗೊಂಡಿದೆ. ಅಶೋಕನಗರದ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ವತಿಯಿಂದ ಆಯುರ್ವೇದ ವಿಶೇಷ ಚಿಕಿತ್ಸಾ ವಿಭಾಗಗಳಾದ ಪಂಚಕರ್ಮ, ಕಾಯ ಚಿಕಿತ್ಸಾ, ಚರ್ಮ ರೋಗ, ನರರೋಗ, ಮೂಳೆ ಮತ್ತು ಸಂಧಿ ರೋಗ, ಶಾಲಾಕ್ಯ (ಇಎನ್‌ಟಿ), ಶಲ್ಯ ಚಿಕಿತ್ಸಾ ವಿಭಾಗಗಳನ್ನು ತೆರೆಲಾಗಿದ್ದು, ತಜ್ಞ ವೈದ್ಯರ ಸಹಕಾರದೊಂದಿಗೆ ಸೇವೆ ಲಭ್ಯವಾಗಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News