×
Ad

ಮಂಗಳೂರು ಬೈಸಿಕಲ್ ಕ್ಲಬ್ ವೆಬ್‌ಸೈಟ್‌ಗೆ ಚಾಲನೆ

Update: 2016-07-04 00:25 IST

ಮಂಗಳೂರು, ಜು.3: ನೂತನ ಸೈಕ್ಲಿಸ್ಟ್ ಆಸಕ್ತರಿಗೆ ಮಾಹಿತಿ ನೀಡುವ, ಸಮಾಜದಲ್ಲಿ ಸ್ವಸ್ಥತೆ ಹಾಗೂ ಪರಿಸರಸ್ನೇಹವನ್ನು ಪಸರಿಸುವ ವೇದಿಕೆಯಾಗಿ ಮಂಗಳೂರು ಬೈಸಿಕಲ್ ಕ್ಲಬ್(ಎಂಬಿಸಿ)ನ ಅಧಿಕೃತ ವೆಬ್‌ಸೈಟ್‌ನ್ನು ಮಂಗಳೂರು ಡಿಸಿಪಿ(ಕಾನೂನು ಮತ್ತು ಸುವ್ಯವಸ್ಥೆ) ಕೆ.ಎಂ.ಶಾಂತರಾಜು ರವಿವಾರ ಅನಾವರಣಗೊಳಿಸಿದರು.

ಈ ಸಂದಭರ್ ಮಾತನಾಡಿದ ಅವರು, ಯುವಜನತೆ ಕೆಟ್ಟ ಅಭ್ಯಾಸ ಬೆಳೆಸಿಕೊಳ್ಳುವುದನ್ನು ತಡೆಯಲು ಸೈಕ್ಲಿಂಗ್‌ನಂತಹ ಹವ್ಯಾಸಗಳು ಉತ್ತೇಜನ ನೀಡುತ್ತವೆ. ಇದನ್ನೊಂದು ಗುಂಪು ಚಟುವಟಿಕೆಯಾಗಿ ಕೈಗೊಂಡಾಗ ಇನ್ನಷ್ಟು ಮಂದಿಗೆ ಪ್ರೇರೇಪಣೆ ನೀಡುತ್ತದೆ. ಜನರನ್ನು ಸಾಧ್ಯವಾದಷ್ಟು ಈ ಕ್ರೀಡೆಯತ್ತ ಸೆಳೆಯುವ ಕೆಲಸ ಆಗಬೇಕಿದೆ ಎಂದರು.

ಕ್ಲಬ್ ಅಧ್ಯಕ್ಷ ಡೋನಿ ಮಿನೇಜಸ್ ಸ್ವಾಗತಿಸಿದರು. ಕ್ಲಬ್ ಬೆಳೆದು ಬಂದ ಹಾದಿಯ ಬಗ್ಗೆ ಹಾಗೂ ವೆಬ್‌ಸೈಟ್ ಬಗ್ಗೆ ಪ್ರಧಾನ ಕಾರ್ಯದರ್ಶಿ ಗಣೇಶ್ ನಾಯಕ್ ವಿವರಣೆ ನೀಡಿದರು. ಉಪಾಧ್ಯಕ್ಷ ಡಾ.ಪ್ರೀತಂ ಶರ್ಮ, ಜತೆ ಕಾರ್ಯದರ್ಶಿ ದಿಜರಾಜ್ ನಾಯರ್, ಖಜಾಂಚಿ ಆನಂದ ಪ್ರಭು ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ರಹೀಂ ಟೀಕೆ, ಝಾಹಿರ್ ಮನ್ನಿಪ್ಪಾಡಿ, ಡಾ.ಶೈಲೇಶ್ ಶೆಣೈ, ಗೌರವ್ ಪ್ರಭು ಸಹಕರಿಸಿದರು. ಅಕ್ಷತಾ ಪ್ರಾರ್ಥಿಸಿ, ಚೇತನ್ ಪಿಲಿಕುಳ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ, ಗೌರವ
ಕ್ಲಬ್ ಚಟುವಟಿಕೆಗಳಾದ 200 ಕಿ.ಮೀ. ಲೀಗ್ ಹಾಗೂ 100 ಕಿ.ಮೀ. ಲೀಗ್ ಯಶಸ್ವಿಯಾಗಿ ಪೂರೈಸಿದವರನ್ನು ಈ ಸಂದರ್ಭ ಗೌರವಿಸಲಾಯಿತು. ದಿನವೊಂದರಲ್ಲಿ 400 ಕಿ.ಮೀ. ಹಾಗೂ 300 ಕಿ.ಮೀ. ಕ್ರಮಿಸುವ ಸಾಧನೆ ಮಾಡಿದ ಡೋನಿ ಮಿನೇಜಸ್, ಕಿಶನ್ ಬಂಗೇರರನ್ನು ಹಾಗೂ ಸೈಕಲ್ ಸವಾರಿ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಹಿರಿಯ ಸೈಕ್ಲಿಸ್ಟ್‌ಗಳಾದ ಅಶೋಕ್‌ವರ್ಧನ್, ಡಾ.ಕೆ.ಆರ್.ಉಡುಪ, ಡಾ.ಹೆಬ್ಬಾರ್, ಮ್ಯಾಕ್ಸಿ ಮಿನೇಜಸ್, ಗೋಪಾಲಕೃಷ್ಣ ಬಾಳಿಗಾ ಅವರನ್ನು ಗೌರವಿಸಲಾಯಿತು.
 ಇದೇ ಸಂದರ್ಭ ‘ಎಂಬಿಸಿ ಗ್ಯಾಂಗ್‌ವಾರ್’ ಸ್ಪರ್ಧೆಯ ಮೊದಲ ಸೀಸನ್‌ನಲ್ಲಿ ಗೆದ್ದ ಡಾ.ಪ್ರೀತಂ ಶರ್ಮ ಮತ್ತು ತಂಡದವರಿಗೆ ಗ್ಯಾಂಗ್‌ವಾರ್ ಟ್ರೋಫಿಯನ್ನು ಹಸ್ತಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News