ಢಾಕಾ ಐಸಿಸ್ ದಾಳಿ: ಭಯೋತ್ಪಾದಕರಲ್ಲಿ ಒಬ್ಬ ಆಡಳಿತ ಪಕ್ಷ ಅವಾಮಿ ಲೀಗ್ ನ ಹಿರಿಯ ನಾಯಕನ ಪುತ್ರ

Update: 2016-07-04 05:47 GMT

     ಢಾಕಾ,ಜುಲೈ 4: ಬಾಂಗ್ಲಾದೇಶದ ಆಡಳಿತಾರೂಢಪಕ್ಷ ಅವಾಮಿ ಲೀಗ್‌ನ ಓರ್ವ ಹಿರಿಯ ನಾಯಕನ ಪುತ್ರ ಢಾಕಾ ರೆಸ್ಟೊರೆಂಟ್‌ಗೆ ದಾಳಿ ನಡೆಸಿದ ಏಳು ಮಂದಿ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದಾನೆ ಎಂದು ಬಿಡಿನ್ಯೂಸ್ ಪತ್ರಿಕೆ ವರದಿಮಾಡಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳಲ್ಲಿ ಇಂತಹ ಸಂದೇಹ ವ್ಯಕ್ತವಾಗಿದೆ. ಈ ಘಟನೆಯಲ್ಲಿ ದಾಳಿಕೋರರು ಇಪ್ಪತ್ತು ಮಂದಿಯನ್ನು ಹತ್ಯೆಗೈದಿದ್ದರು.ಬಿಡಿನ್ಯೂಸ್‌ನ ವರದಿ ಪ್ರಕಾರ ಅವಾಮಿಲೀಗ್‌ನ ಢಾಕಾವಿಭಾಗದ ನಾಯಕ ಬಾಂಗ್ಲಾದೇಶ ಒಲಿಪಿಂಕ್ ಅಸೋಸಿಯೇಶನ್‌ನ ಸಹಕಾರ್ಯದರ್ಶಿ ಎಸ್.ಎಮ್ ಇಮ್ತಿಯಾಝ್ ಖಾನ್ ಬಾಬುಲ್‌ರ ಪುತ್ರ ರೋಹನ್ ಇಮ್ನೆ ಇಮ್ತಿಯಾಝ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದಾನೆ ಎಂದು ಗುರುತಿಸಲಾಗಿದೆ. ರೋಹನ್‌ನನ್ನು ಅವಾಮಿ ಲೀಗ್‌ನ ಬೇರೊಬ್ಬ ನಾಯಕ ಗುರುತಿಸಿದ್ದಾನೆ. ಬಾಬುಲ್‌ರು ತನ್ನ ಪುತ್ರ ನಾಪತ್ತೆ ದೂರನ್ನು ಪೊಲೀಸರಿಗೆ ಈವರ್ಷ ನೀಡಿದ್ದರು.

    ಬಿಡಿ ನ್ಯೂಸ್ ಢಾಕಾದ ಅವಾಮಿಲೀಗ್‌ನ ಉಪಾಧ್ಯಕ್ಷರ ಆಧಾರ ದಲ್ಲಿ ವರದಿಮಾಡಿದೆ. ಮಾಧ್ಯಮಗಳು ಮತ್ತು ಫೇಸ್‌ಬುಕ್‌ನಲ್ಲಿ ಫೋಟೊ ಬಂದಾಗ ಈ ವ್ಯಕ್ತಿ ಇಮ್ತಿಯಾಝ್ ಬಾಬುಲ್‌ರ ನಾಪತ್ತೆಯಾದ ಪುತ್ರನೆಂದು ಗುರುತಿಸಿದೆವು ಎಂದು ಅವರು ಹೇಳಿದ್ದಾರೆ. ಅವರ ಪುತ್ರ ಢಾಕಾದ ಶ್ರೀಮಂತರು ಕಲಿಯುವ ಎ ಲೆವೆಲ್ ಶಾಲೆಯಲ್ಲಿ ಕಲಿತ್ತಿದ್ದಾನೆ. ಇದೇ ಶಾಲೆಯಲ್ಲಿ ಅವನ ತಾಯಿ ಶಿಕ್ಷಕಿಯಾಗಿದ್ದಾರೆ.ಆತನ ಮಾಜಿ ಸಹಪಾಠಿಗಳು ರೋಹನ್ ತನ್ನ ತಂದೆ ತಾಯಂದಿರ ಜೊತೆಯಲ್ಲಿರುವ ಫೋಟೊವನ್ನು ಸೋಶಿಯಲ್ ಮೀಡಿಯದಲ್ಲಿ ಅಫ್‌ಲೋಡ್ ಮಾಡಿದ್ದರು. ಢಾಕಾದ ಎಸ್‌ಐಟಿಐ ಇಂಟಲಿಜೆನ್ಸ್ ಟ್ವಿಟರ್‌ನಲ್ಲಿ ಹಾಕಿದಫೋಟೊ ಮತ್ತು ಐಸಿಸ್ ಪ್ರಕಟಿಸಿದ ದಾಳಿಕೋರರ ಫೋಟೊವೂ ಒಬ್ಬನದೇ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News