×
Ad

ಅಕ್ಷರದಾಸೋಹ ನೌಕರರ ವೇತನ ಏರಿಕೆಗೆ ಸಿಐಟಿಯು ಒತ್ತಾಯ

Update: 2016-07-04 18:31 IST

ಮಂಗಳೂರು, ಜು.4:ನಿರಂತರ ಹೋರಾಟ ನಡೆಸಿದರೂ ರಾಜ್ಯ ಸರಕಾರ ಬರೀ 2,000 ರೂ. ವೇತನ ನಿಗದಿಪಡಿಸಿ ನೌಕರರನ್ನು ದುಡಿಸುತ್ತಿದೆ. ಕೇಂದ್ರದ ಸರಕಾರ ಹಿಂದಿನ ಕಾಂಗ್ರೆಸ್ ಸರಕಾರ ನಿಗದಿಪಡಿಸಿದ್ದ ವೇತನವನ್ನು 1,000 ರೂ.ನಷ್ಟು ಏರಿಕೆ ಮಾಡುವ ಭರವಸೆ ನೀಡಿದ್ದರೂ, ಈವರೆಗೂ ಜಾರಿಗೊಳಿಸಿಲ್ಲ. ಕೂಡಲೇ ಎರಡು ಸರಕಾರಗಳು ಅಕ್ಷರದಾಸೋಹ ನೌಕರರ ವೇತನ ಏರಿಕೆ ಮಾಡಬೇಕೆಂದು ಸಿಐಟಿಯು ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.

ಅವರು ಇತ್ತೀಚೆಗೆ ನಗರದ ಸರಕಾರಿ ನೌಕರರ ಸಭಾಭವನದಲ್ಲಿ ಜರುಗಿದ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ದಕ್ಷಿಣ ಕನ್ನಡ ಜಿಲ್ಲಾ 6ನೆ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಯಶೋಧರ್ ಮಾತನಾಡಿ, ಈ ಯೋಜನೆ ಸರಕಾರದ ಯೋಜನೆಯಾಗಿದ್ದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗಿದೆ. ಇದನ್ನು ತಯಾರಿಸುವ ಬಿಸಿಯೂಟ ನೌಕರರ ಪ್ರಾಮುಖ್ಯತೆ ಕೂಡ ಅನನ್ಯ ಎಂದು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ವಹಿಸಿದ್ದರು. ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಗಿರಿಜಾ ಮೂಡುಬಿದಿರೆ, ಭವ್ಯ ಮುಚ್ಚೂರುರವರು ಖಜಾಂಚಿಯಾಗಿರುವ 13 ಮಂದಿಯ ಪದಾಧಿಕಾರಿಗಳು ಹಾಗೂ 17 ಮಂದಿಯ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.
   
ಕಾರ್ಯಕ್ರಮದಲ್ಲಿ ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್, ಜೆಎಂಎಸ್‌ನ ಮುಂದಾಳು ವಿಲಾಸಿನಿ ತೊಕ್ಕೊಟ್ಟು, ಸಿಐಟಿಯು ನಾಯಕರಾದ ರೋಬರ್ಟ್ ಡಿಸೋಜ, ರಾಮಣ್ಣ ವಿಟ್ಲ, ಜಯಲಕ್ಷ್ಮೀ, ಲತಾ, ಬಬಿತಾ, ಯಶೋಧಾ ಮೊದಲಾದವರು ಉಪಸ್ಥಿತರಿದ್ದರು. ಗಿರಿಜಾ ಮೂಡುಬಿದಿರೆ ಸ್ವಾಗತಿಸಿ, ಭವ್ಯ ಮುಚ್ಚೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News