ಹಸಿದವರಿಗೆ ಇನ್ನೊಬ್ಬರ ಹಸಿವು ತಿಳಿಯುತ್ತದೆ: ಸಿರಾಜುದ್ದೀನ್ ಪೈಝಿ

Update: 2016-07-04 18:11 GMT

ಪುತ್ತೂರು, ಜು4: ಹಸಿವಾದಾಗ ನಮಗೆ ಇನ್ನೊಬ್ಬರ ಹಸಿವು, ನೋವಿನ ವಿಚಾರ ತಿಳಿಯುತ್ತದೆ. ಪವಿತ್ರ ರಮಝಾನ್ ತಿಂಗಳ ಒಂದು ತಿಂಗಳ ಉಪವಾಸ ಮಾನವನಿಗೆ ಆಧ್ಯಾತ್ಮದ ಜೊತೆಗೆ ಜೀವನದ ಪಾಠವನ್ನು ಕಲಿಸುತ್ತದೆ ಎಂದು ಬಪ್ಪಳಿಗೆ ಸಿರಾಜುದ್ದೀನ್ ಪೈಝಿ ಹೇಳಿದರು.

ಅವರು ಪುತ್ತೂರಿನ ಪುರಭವನದಲ್ಲಿ ರವಿವಾರ ಕಾವು ಹೇಮನಾಥ ಶೆಟ್ಟಿ ಮತ್ತು ಅನಿತಾ ಹೇಮನಾಥ ಶೆಟ್ಟಿ ದಂಪತಿ ವತಿಯಿಂದ ನಡೆದ ಸೌರ್ಹಾರ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು. ಪ್ರತಿಯೊಂದು ಧರ್ಮವೂ ಉಪವಾಸ ವ್ರತವನ್ನು ಬೋಧಿಸುತ್ತದೆ. ಧರ್ಮದಲ್ಲಿ ಭೇದ ಭಾವವಿಲ್ಲ. ಸೂರ್ಯ ಚಂದ್ರರು ಎಲ್ಲಾ ಧರ್ಮದವರಿಗೂ ಒಂದೇ ಆಗಿರುವಾಗ ಅದರ ಬೆಳಕಿನಲ್ಲಿ ನಡೆದಾಡುವ ನಮ್ಮೊಳಗೆ ಭೇದಭಾವ ಸರಿಯಲ್ಲ. ಪುತ್ತೂರಿನಲ್ಲಿ ಎಲ್ಲಾ ಧರ್ಮಿಯರ ಹಬ್ಬ ಆಚರಣೆಗಳನ್ನು ಎಲ್ಲರೂ ಒಟ್ಟಾಗಿ ನಡೆಸಿದರೆ ಹಬ್ಬಕ್ಕೊಂದು ಜೀವ ತುಂಬಿದಂತಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಸಂಯೋಜಕ ಹೇಮನಾಥ ಶೆಟ್ಟಿ ಮಾತನಾಡಿ, ಎಲ್ಲರೊಂದಿಗೆ ಸೇರಿ ಇಫ್ತಾರ್ ಆಚರಣೆ ಮಾಡಬೇಕೆಂಬ ಉದ್ದೇಶದಿಂದ ಮತ್ತು ಸೌಹಾರ್ದತೆಗಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಬಾಗವಹಿಸುವ ಮೂಲಕ ಸಹಕಾರ ನೀಡಿದ್ದಾಗಿ ಹೇಳಿ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮರೀಲ್ ಚರ್ಚಿನ ಧರ್ಮಗುರು ಪಾ. ಫ್ರಾನ್ಸಿಸ್ ಅಲ್ಮೆಡಾ, ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಎನ್.ಕೆ ಜಗನ್ನಿವಾಸ್ ರಾವ್, ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್, ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಯು.ಲೋಕೇಶ್ ಹೆಗ್ಡೆ, ಸಾಬಾ ಸಾಹೇಬ್ ಪಾಲ್ತಾಡ್, ಅಜಯ್ ಆಳ್ವ ನಗರ, ಲ್ಯಾನ್ಸಿ ಮಸ್ಕರೇನಸ್, ಕುಂಬ್ರ ದುರ್ಗಾಪ್ರಸಾದ್, ಮಲ್ಲಿಕಾ ಪಕ್ಕಳ, ಎ.ಕೆ. ಜಯರಾಂ ರೈ ಕೆಯ್ಯೂರು, ಎಸ್.ಬಿ. ಜಯರಾಂ ರೈ, ನಗರಸಭಾ ಸದಸ್ಯರಾದ ಅನ್ವರ್ ಖಾಸಿಂ, ಮುಕೇಶ್ ಕೆಮ್ಮಿಂಜೆ, ಮುಹಮ್ಮದ್ ಅಲಿ, ಅಬೂಬಕರ್ ಮಲಾರ್, ರವಿಪ್ರಸಾದ್ ಶೆಟ್ಟಿ ಬನ್ನೂರು, ಖಾದರ್ ಕೆಮ್ಮಿಂಜೆ, ಕೊರಗಪ್ಪಗೌಡ ಬನ್ನೂರು, ವಕೀಲರಾದ ಜಗನ್ನಾಥ್ ರೈ, ಅಬ್ದುಲ್ ಖಾದರ್ ಮೇರ್ಲ , ಮುರಳೀಧರ್ ರೈ ಮಠಂತಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ನೇಮಾಕ್ಷ ಸುವರ್ಣ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News