ಬ್ರೆಕ್ಸಿಟ್ ಹೊರತಾಗಿಯೂ ಬ್ರಿಟನ್ ನ್ಯಾಟೊದಲ್ಲಿ ಇರುತ್ತದೆ: ಮುಖ್ಯಸ್ಥ

Update: 2016-07-04 18:35 GMT

ಬ್ರಸೆಲ್ಸ್, ಜು. 4: ಐರೋಪ್ಯ ಒಕ್ಕೂಟದಿಂದ ಹೊರಹೋಗಲು ಬ್ರಿಟನ್ ತೆಗೆದುಕೊಂಡಿರುವ ನಿರ್ಧಾರ ಹಾಗೂ ಪ್ರಧಾನಿ ಡೇವಿಡ್ ಕ್ಯಾಮರೂನ್‌ರ ರಾಜೀನಾಮೆ ಹೊರತಾಗಿಯೂ, ಬ್ರಿಟನ್‌ನ ನೂತನ ಸರಕಾರವು ನ್ಯಾಟೊಗೆ ಬದ್ಧವಾಗಿರುತ್ತದೆ ಎಂಬ ಬಗ್ಗೆ ತನಗೆ ವಿಶ್ವಾಸವಿದೆ ಎಂದು ನ್ಯಾಟೊ ಮುಖ್ಯಸ್ಥ ಜೆನ್ಸ್ ಸ್ಟಾಲ್ಟನ್‌ಬರ್ಗ್ ಸೋಮವಾರ ಹೇಳಿದರು.

‘‘ಬ್ರೆಕ್ಸಿಟ್ ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟಗಳ ನಡುವಿನ ಸಂಬಂಧವನ್ನು ಬದಲಾಯಿಸಬಹುದು, ಆದರೆ, ನ್ಯಾಟೊದಲ್ಲಿ ಬ್ರಿಟನ್ ಹೊಂದಿರುವ ಸ್ಥಾನವನ್ನು ಅದು ಬದಲಾಯಿಸಲಾರದು ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯಾಟೊ ಮುಖ್ಯಸ್ಥ ಹೇಳಿದರು.

ಈ ವಾರ ವಾರ್ಸಾದಲ್ಲಿ ನಡೆಯಲಿರುವ ನ್ಯಾಟೊ ಶೃಂಗಸಭೆಗೆ ಮುನ್ನ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News