×
Ad

ಉಡುಪಿ: ಗ್ರಾಪಂಗಳಲ್ಲಿ ‘ಬಾಪೂಜಿ’ ಸೇವಾ ಕೇಂದ್ರ

Update: 2016-07-05 00:10 IST

ಉಡುಪಿ, ಜು.4: ಗ್ರಾಮೀಣ ಜನತೆಯ ಹಿತವನ್ನು ಗಮನದಲ್ಲಿ ರಿಸಿ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಸೇವೆಯನ್ನು ಒಂದೇ ಸೂರಿನಡಿ ಒದಗಿಸಲು ಜಿಲ್ಲೆಯ ಆಯ್ದ ಗ್ರಾಪಂಗಳಲ್ಲಿ ಬಾಪೂಜಿ ಸೇವಾಕೇಂದ್ರಗಳನ್ನು ತೆರೆಯಲಾಗುವುದು ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಪ್ರಕಟನೆ ತಿಳಿಸಿದೆ.

ಪ್ರಾಥಮಿಕ ಹಂತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಜಿ2ಸಿ 43 ಸೇವೆಗಳು, ಕಂದಾಯ ಇಲಾಖೆಯ ಜಿ2ಸಿ 40 ಸೇವೆಗಳು ಹಾಗೂ ಇನ್ನಿತರ ಬಿ2ಸಿ 17 ಸೇವೆಗಳನ್ನು ಈ ಗ್ರಾಪಂಗಳ ಬಾಪೂಜಿ ಸೇವಾಕೇಂದ್ರಗಳ ಮೂಲಕ ನೀಡಲಾಗುವುದು.

ಗ್ರಾಪಂಗಳ ಪಂಚತಂತ್ರ ತಂತ್ರಾಂಶದಲ್ಲಿ ಕಂದಾಯ ಇಲಾಖೆಯ 39 ಸೇವೆಗಳನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಕಾರ್ಕಳ ತಾಲೂಕಿನ ಬೆಳ್ಮಣ್, ಹೆಬ್ರಿ, ಈದು, ಕುಕ್ಕುಂದೂರು, ಮಾಳ, ಮರ್ಣೆ, ಮಿಯ್ಯಿರು, ಮುಡಾರು, ಮುದ್ರಾಡಿ, ಮುಂಡ್ಕೂರು, ನಲ್ಲೂರು, ನೀರೆ, ನಿಟ್ಟೆ, ಶಿರ್ಲಾಲ್, ವರಂಗ.

ಕುಂದಾಪುರ ತಾಲೂಕಿನ ಅಜ್ರಿ, ಆಲೂರು, ಅಮಾಸೆಬೈಲು, ಬಸ್ರೂರು, ಬೆಳ್ವೆ, ಬೀಜಾಡಿ, ಬೀಜೂರು, ಬೈಂದೂರು, ಚಿತ್ತೂರು, ಗಂಗೊಳ್ಳಿ, ಗೋಳಿಹೊಳೆ, ಗುಜ್ಜಾಡಿ, ಹಕ್ಲಾಡಿ, ಹೊಂಬಾಡಿ-ಮುಂಡಾಡಿ, ಹೆಮ್ಮಾಡಿ, ಹೊಸಂಗಡಿ, ಜಡ್ಕಲ್, ಕಾಳಾವರ, ಕರ್ಕುಂಜೆ, ಕಾವ್ರಾಡಿ, ಕಿರಿಮಂಜೇಶ್ವರ, ಕೋಣಿ, ನಾಡಾ, ನಾವುಂದ, ಪಡುವರಿ, ಶಂಕರನಾರಾಯಣ, ಶೀರೂರು, ಸಿದ್ದಾಪುರ, ತಲ್ಲೂರು, ತ್ರಾಸಿ, ಉಪ್ಪುಂದ, ಯಡ್ತರೆ ಹಾಗೂ ಉಡುಪಿ ತಾಲೂಕಿನ ಅಲೆವೂರು, ಬಡಾ, ಬೈರಂಪಳ್ಳಿ, ಬೆಳ್ಳೆ, ಬೊಮ್ಮರಬೆಟ್ಟು, ಚೇರ್ಕಾಡಿ, ಹಂದಾಡಿ, ಹಾರಾಡಿ, ಹೆಜಮಾಡಿ, ಐರೋಡಿ, ಕಲ್ಯಾಣಪುರ, ಕೋಡಿಬೆಟ್ಟು, ಕೊಕ್ಕರ್ಣೆ, ಕೋಟ, ಮಣಿಪುರ, ನಾಲ್ಕೂರು, ಪಡುಬಿದ್ರೆ, ಪಲಿಮಾರು, ಪೆರ್ಡೂರು, ಶಿರ್ವ, ಉಪ್ಪೂರು, ವಡ್ಡರ್ಸೆ ಪಂಚಾಯತ್‌ಗಳಲ್ಲಿ ಬಾಪೂಜಿ ಸೇವಾಕೇಂದ್ರ ಆರಂಭಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News