ಪುತ್ತೂರಿಗೆ ಕುಡ್ಸೆಂಪ್ 2ನೆ ಹಂತದ ಕಾಮಗಾರಿ: ಯೋಜನಾ ವರದಿಗೆ ನಗರಸಭೆ ಅನುಮೋದನೆ
ಪುತ್ತೂರು, ಜು.4: ನಗರಕ್ಕೆ ಸಮಗ್ರ ಪ್ರಮಾ ಣದಲ್ಲಿ ಕುಡಿಯುವ ನೀರು ಸರಬರಾಜು ಪೂರೈಸುವ ಉದ್ದೇಶದಿಂದ ಸುಮಾರು 40 ಕೋ.ರೂ. ವೆಚ್ಚದಲ್ಲಿ ಸರಕಾರ ಮಂಜೂರು ಗೊಳಿಸಿರುವ 2ನೆ ಹಂತದ ಕುಡ್ಸೆಂಪ್ ಕಾಮಗಾರಿಗೆ ಸಂಬಂಧಿಸಿ ಕೊಲ್ಕೊತ್ತಾ ಮೂಲದ ಕಂಪೆನಿ ತಯಾರಿಸಿರುವ ವಿಸ್ತೃತ ಯೋಜನಾ ವರದಿ (ಡಿಪಿಆರ್)ಗೆ ಪುತ್ತೂರು ನಗರಸಭೆ ಅನುಮೋದನೆ ನೀಡಿದೆ.
ಯೋಜನಾ ವರದಿಗೆ ಸಂಬಂಧಿಸಿದ ವಿಶೇಷ ಸಭೆಯು ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡು ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಸದಸ್ಯರು ನೀಡಿದ ಸಲಹೆ-ಸೂಚನೆಗಳನ್ನು ಒಳಗೊಂಡ ಡಿಪಿಆರ್‌ನ್ನು ಸರಕಾರಕ್ಕೆ ಸಲ್ಲಿ ಸಲು ಸಭೆ ನಿರ್ಣಯಿಸಿತು.
ಪುತ್ತೂರು ಮುಖ್ಯರಸ್ತೆಯಿಂದ ಎಪಿಎಂಸಿ ರಸ್ತೆಗೆ ತಿರುಗುವಲ್ಲಿ ರಸ್ತೆ ಕಿರಿದಾಗಿರುವುದರಿಂದ ಬಸ್‌ಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲ್ಲಿ ಆ ಭಾಗದಲ್ಲಿ ರಸ್ತೆ ವಿಸ್ತರಣೆಗಾಗಿ ಭೂಸ್ವಾಧೀನ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ವೇದಿಕೆಯಲ್ಲಿ ನಗರಸಭೆಯ ಉಪಾಧ್ಯಕ್ಷ ವಿಶ್ವನಾಥ ಗೌಡ, ಪೌರಾಯುಕ್ತೆ ರೇಖಾ ಜೆ. ಶೆಟ್ಟಿ ಉಪಸ್ಥಿತರಿದ್ದರು.