×
Ad

ಪಡುಕೆರೆ, ಮಲ್ಪೆಗಳಲ್ಲಿ ಮುಂದುವರಿದ ಕಡಲ್ಕೊರೆತ

Update: 2016-07-05 00:17 IST

ಉಡುಪಿ, ಜು.4: ಕಳೆದ ಕೆಲವು ದಿನಗಳಿಂದ ಮಳೆ ಯೊಂದಿಗೆ ಭಾರೀ ಗಾಳಿ ಬೀಸುತ್ತಿರುವುದರಿಂದ ಕರಾವಳಿ ತೀರದಲ್ಲಿ ಕಡಲ್ಕೊರೆತ ಮುಂದುವರಿದಿದೆ. ಮಲ್ಪೆಯ ಬೀಚ್‌ನಲ್ಲಿ ಇಂಟರ್‌ಲಾಕ್ ಬಳಸಿ ನಿರ್ಮಿ ಸಲಾಗಿದ್ದ ರಸ್ತೆ ಭಾಗಶಃ ಸಮುದ್ರದ ಪಾಲಾಗಿದೆ.
ಅದೇ ರೀತಿ ಉದ್ಯಾವರ ಪಡುಕೆರೆಯಲ್ಲೂ ಭೀಮಗಾತ್ರದ ಸಮುದ್ರದ ಅಲೆಗಳು ಕಾಂಕ್ರಿಟ್ ರಸ್ತೆಗೆ ಅಪ್ಪಳಿಸುತ್ತಿದೆ. ಸಮುದ್ರದ ಅಬ್ಬರ ಇದೇ ರೀತಿ ಮುಂದುವರಿದರೆ ರಸ್ತೆಯ ಒಂದು ಭಾಗ ಕಡಲೊ ಡಲು ಸೇರುವ ಭೀತಿ ವ್ಯಕ್ತವಾಗಿದೆ.
ಮಲ್ಪೆ ಸಮುದ್ರ ಕಿನಾರೆಯಲ್ಲಿ ನಿನ್ನೆಯಿಂದ ಕಡಲ್ಕೊರೆತ ತೀವ್ರಗೊಂಡಿದೆ. ಇಂದು ಅಮಾವಾಸ್ಯೆ ಯಾದ ಕಾರಣ ರಾತ್ರಿ ಕಡಲಬ್ಬರ ಇನ್ನೂ ಜೋರಾ ಗಿರುವ ಸಾಧ್ಯತೆ ಇದೆ. ಈಗಾಗಲೇ ಒಂದಷ್ಟು ಭಾಗದ ರಸ್ತೆ ಕುಸಿದಿದೆ. ತೊಟ್ಟಂ ರಸ್ತೆಗೆ ಸಂಪರ್ಕ ಹೊಂದಿರುವ ಉತ್ತರದ ಈ ಇಂಟರ್‌ಲಾಕ್ ರಸ್ತೆಯನ್ನು ಬೀಚ್‌ಗೆ ಬರುವ ಪ್ರವಾಸಿಗರು ಹೆಚ್ಚಾಗಿ ಬಳಸುತ್ತಾರೆ.
ಮಲ್ಪೆ, ಪಡುಕೆರೆ ಅಲ್ಲದೇ ಮೂಳೂರು ಹಾಗೂ ಬಡಾ ಎರ್ಮಾಳು ಪ್ರದೇಶದಲ್ಲೂ ಸಮುದ್ರದ ಅಬ್ಬರ ಜೋರಿದ್ದು, ಮನೆಯೂ ಸೇರಿದಂತೆ ಸದ್ಯಕ್ಕೆ ಯಾವುದೇ ಅಪಾಯ ಎದುರಾಗದು ಎಂದು ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದರು.
ಕುಂದಾಪುರ ತಾಲೂಕಿನ ಮರವಂತೆಯಲ್ಲಿ ಕಡಲ್ಕೊರೆತ ಅಲ್ಪ ಪ್ರಮಾಣದಲ್ಲಿ ಮುಂದುವರಿದಿದೆ. ಆದರೆ ಮನೆಗಳಿಗೆ ಯಾವುದೇ ಅಪಾಯ ಎದು ರಾಗಿಲ್ಲ ಎಂದು ತಹಶೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News