ಸೆಲ್ಫಿ ಗೀಳು ತಂದ ಹೊಸ ರೋಗ, "ಸೆಲ್ಫಿ ಮೊಣಕೈ"
Update: 2016-07-05 09:43 IST
ನ್ಯೂಯಾರ್ಕ್,ಜು.5: ಸೆಲ್ಫಿ ಪ್ರಿಯರಿಗೆ ಒಂದು ಕಹಿ ಸುದ್ದಿ. ಟೆನಿಸ್ ಮೊಣಗೈ, ಗಾಲ್ಫ್ ಮೊಣಗೈನಂತೆ ಇದೀಗ ಸೆಲ್ಫಿ ಮೊಣಗೈ ಎಂಬ ಹೊಸ ರೋಗಲಕ್ಷಣ ಕಾಣಿಸಿಕೊಂಡಿದೆ. ಪರಿಪೂರ್ಣ ಸೆಲ್ಫಿ ತೆಗೆಯುವ ಪ್ರಯತ್ನದಲ್ಲಿ ಸೆಲ್ಫಿಪ್ರಿಯರಿಗೆ ಸೆಲ್ಫಿ ಮೊಣಕೈ ರೋಗ ಬರುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಸೆಲ್ಫಿಗೀಳು ಅಂಟಿಸಿಕೊಂಡವರ ಮೊಣಗೈ ಮೂಲದಲ್ಲಿ ಅಸಾಧ್ಯ ನೋವು ಕಾಣಿಸಿಕೊಂಡು ಅವರು ವೈದ್ಯರಲ್ಲಿಗೆ ಬರಬೇಕಾದ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದ್ದಾರೆ.
ವಿಶೇಷ ಶಸ್ತ್ರಚಿಕಿತ್ಸಾ ಆಸ್ಪತ್ರೆಯ ಕ್ರೀಡಾ ಔಷಧ ತಜ್ಞ ಜೋರ್ಡನ್ ಮೆಟ್ಸಿ ಅವರ ಪ್ರಕಾರ, ಅತಿಯಾದ ಬಳಕೆಯಿಂದ ಈ ಸಮಸ್ಯೆ ಸೃಷ್ಟಿಯಾಗುತ್ತದೆ. ಪದೇ ಪದೇ ಆ ಭಾಗಕ್ಕೆ ದಣಿವು ಆಗುವುದರಿಂದ ನೋವಿಗೆ ಕಾರಣವಾಗುತ್ತದೆ. ನೀವು ಟೈಪ್ ಮಾಡುವಾಗ, ಎಸ್ಎಂಎಸ್ ಸಂದೇಶಗಳನ್ನು ಕಳುಹಿಸುವಾಗ ಮತ್ತು ಸೆಲ್ಫಿ ತೆಗೆಯುವಾಗ ಈ ನೋವು ಸಹಿಸಲಸಾಧ್ಯವಾಗುತ್ತದೆ.