ಮೆಟ್ಟಿಲಿನಿಂದ ಬಿದ್ದು ಪತಿ, ಪತ್ನಿ ಸಾವು : ಗಾಯಗೊಂಡ ಸೊಸೆ

Update: 2016-07-05 11:30 GMT

ರಾಜ್‌ಕೋಟ್, ಜುಲೈ 5: 128ಕಿಲೊಗ್ರಾಂ ತೂಕದ ಪತ್ನಿ ಮೈಮೇಲೆ ಬಿದ್ದ ಪರಿಣಾಮ ಪತಿ ಹಾಗೂ ಬಿದ್ದು ತಲೆಗೆ ಪೆಟ್ಟಾದ್ದರಿಂದ ಪತ್ನಿಯೂ ಮೃತರಾದ ಘಟನೆ ರಾಜ್‌ಕೋಟ್‌ನಲ್ಲಿ ನಡೆದಿದೆ. ಮಗನಿಗೆ ಹುಷಾರಿಲ್ಲ ಎಂದು ಸೊಸೆ ಹೇಳಿದಾಗ ಗಡಿಬಿಡಿಯಿಂದ ಮಂಜುಳ ವಿಠಲ್ ಎಂಬ ಮಹಿಳೆ ಗಡಿಬಿಡಿಯಿಂದ ಮೆಟ್ಟಲು ಹತ್ತಲು ಹೋಗಿ ಬಿದ್ದಿದ್ದರು. ತನ್ನ ಹಿಂದಿನಿಂದ ಬಂದ ಪತಿಯ ಮೇಲೆ ಬಿದ್ದಿದ್ದರಿಂದ ಪತಿ ನಟವರ್‌ಲಾಲ್ ಅಪ್ಪಚ್ಚಿಯಾದಂತಾಗಿ ಮೃತರಾಗಿದ್ದಾರೆ.

68ವರ್ಷದ ಮಂಜುಳ ವಿಠಲ್ ಭಾರದ ದೇಹದಿಂದಾಗಿ ಮಹಡಿಹತ್ತುತ್ತಿರಲಿಲ್ಲ. ಅವರ ಪತಿಯ ತೂಕವೂ ನೂರುಕೆಜಿಗಿಂತ ಹೆಚ್ಚೇ ಇತ್ತು. ಇವರಿಬ್ಬರ ಮಗ ಮತ್ತು ಮಗಳು ಮೇಲಂತಸ್ತಿನಲ್ಲಿ ವಾಸವಿದ್ದರು. ನಿಮ್ಮ ಮಗನಿಗೆ ದಮ್ಮುಕಟ್ಟಿದಂತಾಗುತ್ತಿದೆ ಎಂದು ಸೊಸೆ ಬಂದು ಅತ್ತೆಗೆ ಹೇಳಿದ್ದರಿಂದ ಕೂಡಲೇ ಮೆಟ್ಟಿಲು ಹತ್ತಿ ಹೋದರು. ಅವರ ಹಿಂದೆ ಪತಿಯೂ ಇದ್ದರು. ಪತಿಯ ಹಿಂದೆ ಸೊಸೆ ಇದ್ದರು. ಆದರೆ ಆಯ ತಪ್ಪಿದ ಮಂಜಾಳ ಪತಿಯಮೇಲೆ ಬಿದ್ದು ಅಲ್ಲಿಂದ ಕೆಳಗೆ ಬಿದ್ದು ತಲೆಗೆಪೆಟ್ಟಾಗಿ ಮೃತರಾಗಿದ್ದಾರೆ.ಪತ್ನಿ ಬಿದ್ದದ್ದರಿಂದ ಅಪ್ಪಚ್ಚಿಯಂತಾದ ಪತಿಯೂ ಗಾಯಗೊಂಡು ಮೃತರಾಗಿದ್ದಾರೆ. ಮಾವನನ್ನು ಉಳಿಸಲು ಹೋಗಿ ಸೊಸೆಯೂ ಗಾಯಗೊಂಡು ಕಾಲು ಮುರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News