×
Ad

ವಿದ್ಯುತ್ ತಂತಿಯಿಂದ ಶಾಕ್ ತಗಲಿ ಕೃಷಿಕ ದುರ್ಮರಣ

Update: 2016-07-05 17:48 IST

ಸುಳ್ಯ, ಜು.5: ಕನಕಮಜಲಿನ ಹಿರಿಯ ಸಹಕಾರಿ ಧುರೀಣ ಕುದ್ಕುಳಿ ದಾಮೋದರ ಗೌಡರು ಮನೆಯ ವಿದ್ಯುತ್ ತಂತಿ ಸರಿಪಡಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗಲಿ ಮೃತಪಟ್ಟಿದ್ದಾರೆ.

ಸೋಮವಾರ ಸಂಜೆ ಮನೆ ಸಮೀಪವಿರುವ ಹೈಟೆಶ್ಯನ್ ತಂತಿ ಜೋಡಿಸಲ್ಪಟ್ಟು ಬೆಂಕಿ ಕಂಡಾಗ, ಅದನ್ನು ಸರಿಪಡಿಸಲು ಯತ್ನಿಸಿದಾಗ ಆಘಾತಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದಾಮೋದರ ಗೌಡರು ಕನಕಮಜಲು ಸೊಸೈಟಿಯ ಮಾಜಿ ಅಧ್ಯಕ್ಷರಾಗಿದ್ದು, ಪ್ರಸ್ತುತ ಕನಕಮಜಲು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿದ್ದರು. ಅವರಿಗೆ 65ವರ್ಷ ವಯಸ್ಸಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News