ಬಜ್ಪೆ: ಪಿಎಫ್‌ಐ ವತಿಯಿಂದ ಈದ್ ಕಿಟ್ ವಿತರಣೆ
Update: 2016-07-05 18:18 IST
ಮಂಗಳೂರು, ಜು.5: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆಏರಿಯಾ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕಿನ್ನಿಪದವು ಅಲ್-ಹುದಾ ಜುಮ್ಮಾ ಮಸೀದಿಯ ಖತೀಬರಾದ ಸುಲೈಮಾನ್ ಸಖಾಫಿ ಸಜಿಪ ದುಆ ನೆರವೇರಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪಾಪ್ಯುಲರ್ಫ್ರಂಟ್ ಆಫ್ ಇಂಡಿಯಾ ಬಜ್ಪೆ ಡಿವಿಷನ್ ಅಧ್ಯಕ್ಷರಾದ ಇಸ್ಮಾಯೀಲ್ ಇಂಜಿನಿಯರ್, ಬಜ್ಪೆಗ್ರಾಮ ಪಂಚಾಯತ್ ಸದಸ್ಯ ನಝೀರ್ ಕಿನ್ನಿಪದವು,ಅಲ್-ಹುದಾ ಜುಮಾ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಹಾಜಿ, ಅಲ್-ಹುದಾ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಮುಹಮ್ಮದ್ ಮೋನಾಕ , ಅಲ್-ಹುದಾ ಜುಮ್ಮಾ ಮಸೀದಿಯ ಸಮಿತಿ ಸದಸ್ಯ ರಹೀಮ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮುಖಂಡರಾದ ರಹ್ಮತುಲ್ಲಾ , ಶಂಸುದ್ದೀನ್, ಝಿಯಾ, ಖಾದರ್, ರಶೀದ್ ಮೌಲಾನಾ,ಷರೀಫ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.