ಪೂರೈಕೆಯಲ್ಲಿ ವ್ಯತ್ಯಯ:ಪಂಜಾಬ್, ಹರ್ಯಾಣಗಳಲ್ಲಿ ತರಕಾರಿ ದುಬಾರಿ

Update: 2016-07-05 12:53 GMT

ಚಂಡಿಗಡ,ಜು.5: ಪೂರೈಕೆಯಲ್ಲಿ ಕೊರತೆಯಿಂದಾಗಿ ಕಳೆದೊಂದು ವಾರದಲ್ಲಿ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ತರಕಾರಿಗಳ ಬೆಲೆಗಳು ಮುಗಿಲಿಗೇರಿವೆ.

ಈ ಹಿಂದೆ ಪ್ರತಿ ಕೆಜಿಗೆ 60-70 ರೂ.ಗೆ ಸಿಗುತ್ತಿದ್ದ ಬಟಾಣಿ ಕೋಡು ಈಗ 100-110 ರೂ.ಗೆ ಮಾರಾಟವಾಗುತ್ತಿದೆ. 40 ರೂ.ಗೆ ಒಂದು ಕೆಜಿ ಸಿಗುತ್ತಿದ್ದ ಟೊಮೆಟೊ ಈಗ 60 ರೂ.ಗೆ ಏರಿದೆ.

ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದು ಶೀಘ್ರ ಕೊಳೆಯುವ ಮತ್ತು ಇತರ ಕೆಲವು ತರಕಾರಿಗಳ ಪೂರೈಕೆಗೆ ವ್ಯತ್ಯಯವನ್ನುಂಟು ಮಾಡಿದೆ ಎನ್ನುವುದು ವರ್ತಕರ ಹೇಳಿಕೆ. ವರ್ಷದ ಈ ಅವಧಿಯಲ್ಲಿ ಉಭಯ ರಾಜ್ಯಗಳಿಗೆ ಹೆಚ್ಚಿನ ಟೊಮೆಟೊ ಹಿಮಾಚಲ ಪ್ರದೇಶದಿಂದಲೇ ಪೂರೈಕೆಯಾಗುತ್ತದೆ.

ಪಂಜಾಬಿ ಅಡುಗೆಯಲ್ಲಿ ಪ್ರಧಾನವಾಗಿರುವ ಟೊಮೆಟೊ ತಿಂಗಳ ಹಿಂದೆ 20 ರೂ.ಗೆ ಕೆಜಿಯಂತೆ ಮಾರಾಟವಾಗುತ್ತಿತ್ತು. ಆದರೆ ನೀರುಳ್ಳಿ ಬೆಲೆ ಕೆಜಿಗೆ ರೂ.15ರಲ್ಲಿ ಮತ್ತು ಬಟಾಟೆ ಬೆಲೆ ರೂ.15-25ರಲ್ಲಿ ಸ್ಥಿರವಾಗಿವೆ.

ಇತರ ಸಾಮಾನ್ಯ ಬಳಕೆಯ ತರಕಾರಿಗಳ ಬೆಲೆಗಳೂ ಗಗನಮುಖಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News