ಕೆಮ್ಮಾರ: ನದಿಗುರುಳಿದ ಜೀಪ್; ಪ್ರಯಾಣಿಕರು ಪಾರು
Update: 2016-07-05 19:35 IST
ಕಡಬ, ಜು.5: ಉಪ್ಪಿನಂಗಡಿಯಿಂದ ಆತೂರಿಗೆ ಸಂಚರಿಸುತ್ತಿದ್ದ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಕೆಮ್ಮಾರ ಎಂಬಲ್ಲಿ ಸೇತುವೆಯಿಂದ ಕೆಳಗುರುಳಿದ ಘಟನೆ ಮಂಗಳವಾರ ಅಪರಾಹ್ನ ನಡೆದಿದೆ.
ಜೀಪು ಆತೂರಿನ ಪುಟ್ಟ ಎಂಬವರಿಗೆ ಸೇರಿದ್ದಾಗಿದ್ದು, ಜೀಪಿನಲ್ಲಿದ್ದ ಪ್ರಯಾಣಿಕರೆಲ್ಲ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.