ಚೀನಾ, ಜಪಾನ್ ಯುದ್ಧ ವಿಮಾನಗಳ ಮುಖಾಮುಖಿ
Update: 2016-07-05 20:29 IST
ಬೀಜಿಂಗ್, ಜು. 5: ಪೂರ್ವ ಚೀನಾ ಸಮುದ್ರದ ವಿವಾದಾಸ್ಪದ ಜಲಪ್ರದೇಶದಲ್ಲಿ ಕಳೆದ ತಿಂಗಳು ಚೀನಾ ಮತ್ತು ಜಪಾನ್‌ಗಳ ಯುದ್ಧ ವಿಮಾನಗಳು ಮುಖಾಮುಖಿಯಾದವು ಎಂಬುದನ್ನು ಚೀನಾದ ರಕ್ಷಣಾ ಸಚಿವಾಲಯ ಖಚಿತಪಡಿಸಿದೆ.
ಎರಡು ಚೀನಾ ವಿಮಾನಗಳು ದೈನಂದಿನ ಗಸ್ತಿನಲ್ಲಿ ತೊಡಗಿದ್ದಾಗ ಎರಡು ಜಪಾನ್ ಯುದ್ಧ ವಿಮಾನಗಳು ಅಮಿತ ವೇಗದಲ್ಲಿ ಬಂದವು ಎಂದು ಬೀಜಿಂಗ್ ಸೋಮವಾರ ಹೇಳಿದೆ.
ಚೀನಾದ ವಿಮಾನಗಳು ‘‘ತಂತ್ರಗಾರಿಕೆಯ ಕ್ರಮಗಳನ್ನು’’ ತೆಗೆದುಕೊಂಡಿತು ಹಾಗೂ ಬಳಿಕ ಜಪಾನ್ ವಿಮಾನಗಳು ಅಲ್ಲಿಂದ ತೆರಳಿದವು ಎಂದು ಹೇಳಿಕೆಯಲ್ಲಿ ಚೀನಾ ತಿಳಿಸಿದೆ.
ಮುಖಾಮುಖಿಯ ವೇಳೆ ಜಪಾನ್ ವಿಮಾನಗಳು ಪ್ರಚೋದನಕಾರಿ ಕೃತ್ಯಗಳನ್ನು ನಡೆಸಿಲ್ಲ ಎಂದು ಜಪಾನ್ ರಕ್ಷಣಾ ಸಚಿವಾಲಯದ ವಕ್ತಾರರೋರ್ವರು ಸೋಮವಾರ ತಿಳಿಸಿದರು.
ಚೀನಾದ ವಿಮಾನಗಳನ್ನು ನೋಡಿ ತನ್ನ ವಿಮಾನಗಳನ್ನು ನಿಯೋಜಿಸಲಾಯಿತು ಎಂದು ಅದು ಹೇಳಿದೆ.