ನಾವೂರು: ಅಕ್ರಮ ಕಸಾಯಿಖಾನೆಗೆ ದಾಳಿ
Update: 2016-07-05 21:45 IST
ಬಂಟ್ವಾಳ, ಜು. 5: ಇಲ್ಲಿನ ನಾವೂರು ಗ್ರಾಮದ ಪಲ್ಲಿಗುಡ್ಡೆ ನಿವಾಸಿ ಅಬ್ಬಾಸ್ ಎಂಬಾತ ನಡೆಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಎ.ಕೆ.ರಕ್ಷಿತ್ ನೇತೃತ್ವದ ಪೊಲೀಸರು ಮಂಗಳವಾರ ದಾಳಿ ನಡೆಸಿ 90 ಕಿಲೋ ದನದ ಮಾಂಸ ವಶಪಡಿಸಿಕೊಂಡ ಘಟನೆ ನಡೆದಿದೆ.
ಆರೋಪಿಯಿಂದ 90 ಕಿಲೋ ದನದ ಮಾಂಸ ಸಹಿತ ಎರಡು ಚೂರಿ ಮತ್ತಿತರ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಅಬ್ಬಾಸ್ ಮತ್ತು ಆತನ ಪುತ್ರ ಅಬ್ದುಲ್ ರಹಿಮಾನ್ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದು, ಕಳೆದ ಹಲವು ಸಮಯದಿಂದ ಕಸಾಯಿಖಾನೆ ನಡೆಸುತ್ತಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.