×
Ad

ಜಿಸಿಸಿ ಗಲ್ಫ್ ಗೈಸ್ ಬೇಂಗಿಲ ವತಿಯಿಂದ ಇಫ್ತಾರ್ ಸಂಗಮ

Update: 2016-07-05 22:15 IST

ಉಪ್ಪಿನಂಗಡಿ, ಜು.5: ಜಿಸಿಸಿ ಗಲ್ಫ್ ಗೈಸ್   ಬೇಂಗಿಲ  ಆಯೋಜಿಸಿದ ಬೃಹತ್ ಇಫ್ತಾರ್ ಸಂಗಮ ಹಾಗೂ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮವು ಸಿರಾಜುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.

ಕಾರ್ಯಕ್ರಮದ ನೇತೃತ್ವವನ್ನು ಸ್ಥಳೀಯ ಖತೀಬ ಬಿ.ಎ. ಬಶೀರ್ ಸಅದಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷ ಟಿ.ಸಿ. ರಫೀಕ್, ಎಸ್ಸೆಸೆಫ್ ಅಧ್ಯಕ್ಷ ಉಮರುಲ್ ಫಾರೂಕ್ ಲತೀಫಿ, ಎಸ್ಸೆಸ್ಸೆಫ್ ಮೂರುಗೋಳಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಸೋಕಿಲ, ಎಸ್.ಎಂ. ಎ ಉಪ್ಪಿನಂಗಡಿ ಝೋನ್ ಕಾರ್ಯದರ್ಶಿ ಹಂಝ ಸೋಕಿಲ, ಎಸ್ಸೆಸೆಫ್ ಬೇಂಗಿಲ ಶಾಖಾ ಕಾರ್ಯದರ್ಶಿ ಸಿದ್ದೀಖ್ ಎಚ್., ಮದರಸ ಅಧ್ಯಾಪಕ ಅಬೂಬಕರ್ ಮುಸ್ಲಿಯಾರ್ ,ಸದರ್ ಉಸ್ತಾದ್ ಅಬೂಬಕರ್ ಲತೀಫಿ ಬೇಂಗಿಲ, ಜಿಸಿಸಿ ಗಲ್ಫ್ ಗೈಸ್ ಪ್ರತಿನಿಧಿಗಳಾದ ಅಶ್ರಫ್ ಬೂಳ್ಳಗುಳಿ ಬಹ್ರೈನ್, ಅಬ್ಬಾಸ್ ಹೂಸಕ್ಕಲು ಕತಾರ್, ಬದ್ರುದ್ದೀನ್ ಕುದುರಡ್ಕ ಸೌದಿ ಮತ್ತಿತರರು ಉಪಸ್ಥಿತರಿದ್ದರು.      

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News