×
Ad

ಮೀನುಗಾರರಿಗೆ ಬಯೋಮೆಟ್ರಿಕ್; ಅವಧಿ ವಿಸ್ತರಣೆ

Update: 2016-07-06 00:16 IST

ಉಡುಪಿ, ಜು.5: ದೋಣಿಗಳಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳುವ ಮೀನುಗಾರರಿಗೆ/ದೋಣಿ ಮಾಲಕರಿಗೆ/ಕಾರ್ಮಿಕರಿಗೆ ಬಯೋಮೆಟ್ರಿಕ್ ಕಾರ್ಡ್ ಗಳನ್ನು ಮಾಡಿಸುವ ಅಂತಿಮ ದಿನವನ್ನು ಜು.15ರವರೆಗೆ ವಿಸ್ತರಿಸಲಾಗಿದೆ. ಇದು ಅಂತಿಮ ಅವಕಾಶವಾಗಿರುವುದರಿಂದ ಮತ್ತು ದೋಣಿಯಲ್ಲಿ ಹೋಗುವ ಕಾರ್ಮಿಕರಿಗೆ ಕಡ್ಡಾಯವಾಗಿರುವುದರಿಂದ ಈ ಸೌಲಭ್ಯವನ್ನು ಎಲ್ಲರೂ ಪಡೆದು ಕೊಳ್ಳಲು ಸೂಚಿಸಲಾಗಿದೆ. ಬಯೋಮೆಟ್ರಿಕ್ ಕ್ಯಾಂಪ್‌ನ್ನು ಮಂಗಳೂರು ತಾಲೂಕಿನ ಮಂಗಳೂರು ಮೀನು ಗಾರಿಕೆ ಬಂದರಿನ ಮಾಹಿತಿ ಕೇಂದ್ರ, ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಹೆಜಮಾಡಿ ಕೋಡಿ, ಮಲ್ಪೆ ಮೀನುಗಾರಿಕಾ ಬಂದರು, ಹಂಗಾರಕಟ್ಟೆ ಹಾಗೂ ಕುಂದಾಪುರ ತಾಲೂಕಿನ ಗಂಗೊಳ್ಳಿ, ಉಪ್ಪುಂದದಲ್ಲಿ ಸ್ಥಳ ನಿಗದಿಪಡಿಸಲಾಗಿದೆ. ರವಿವಾರದಂದೂ ಕ್ಯಾಂಪ್ ತೆರೆದಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News