×
Ad

ಕಾಸರಗೋಡು: ಡೆಂಗ್‌ಗೆ ಮತ್ತೋರ್ವ ಬಲಿ

Update: 2016-07-06 00:17 IST

ಕಾಸರಗೋಡು, ಜು.5: ಜಿಲ್ಲೆಯಲ್ಲಿ ಡೆಂಗ್ ವ್ಯಾಪಕವಾಗಿ ಹರಡುತ್ತಿದ್ದು, ಈ ಜ್ವರಕ್ಕೆ ಇನ್ನೊಂದು ಜೀವ ಬಲಿಯಾಗಿದೆ.
 ಬದಿಯಡ್ಕ ಏತಡ್ಕ ಆನೆಪಳ್ಳದ ಬಾಲಕೃಷ್ಣ ಮೂಲ್ಯ(70) ಎಂಬವರು ಮೃತಪಟ್ಟವರಾಗಿದ್ದಾರೆ. ಕಳೆದ ಹತ್ತು ದಿನಗಳಿಂದ ಜ್ವರ ಬಾಧಿತರಾಗಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಮತ್ತಷ್ಟು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಶನಿವಾರ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಡೆಂಗ್ ಇರುವುದು ಪತ್ತೆಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈ ಬಾರಿ ಡೆಂಗ್‌ಗೆ ಬಲಿ ಯಾದವರ ಸಂಖ್ಯೆ 6ಕ್ಕೇರಿದೆ.
 ಏತಡ್ಕ ಬಳಿಯ ಚಾಲಕ್ಕೋಡುವಿನ ಮಹಿಳೆಯೊಬ್ಬರಿಗೂ ಡೆಂಗ್ ಬಾಧಿ ಸಿದ್ದು, ಅವರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಡೆಂಗ್ ಹಾವಳಿ ತೀವ್ರಗೊಂಡಿದ್ದು, ಜ್ವರ ಬಾಧಿಸಿ ಬದಿಯಡ್ಕ ಸಾಮೂಹಿಕ ಆರೋಗ್ಯ ಕೇಂದ್ರಕ್ಕೆ ತಲುಪಿದವರ ಪೈಕಿ 15 ಮಂದಿಯಲ್ಲಿ ಡೆಂಗ್ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News