×
Ad

ಜಾಂಡಿಸ್‌ನಿಂದ ವಿದ್ಯಾರ್ಥಿನಿ ಮೃತ್ಯು

Update: 2016-07-06 00:20 IST

ಕಾಸರಗೋಡು, ಜು.5: ಹಳದಿ ಕಾಮಾಲೆಗೆ ತುತ್ತಾಗಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಚೌಕಿ ಕೆ.ಕೆ.ಪುರಂನ ಸೂರ್ಯಾ ಕೆ. (21) ಮೃತಪಟ್ಟವರು. ಇ ಆ್ಯಂಡ್ ಸಿ ಇಂಜಿನಿಯರಿಂಗ್ ಮಾಡುತ್ತಿದ್ದ ಸೂರ್ಯ ಕಣ್ಣೂರಿನಲ್ಲಿ ಬ್ಯಾಂಕಿಂಗ್ ಕೋಚಿಂಗ್ ತರಗತಿಗೆ ತೆರಳುತ್ತಿದ್ದರು. ತೀವ್ರ ಜ್ವರದಿಂದ ಕಾಸರಗೋಡಿನ ಆಸ್ಪತ್ರೆಗೆ ದಾಖಲಾಗಿದ್ದ ಸೂರ್ಯಾರಿಗೆ ಜಾಂಡಿಸ್ ಇರುವುದು ಪರೀಕ್ಷೆಯಿಂದ ತಿಳಿದುಬಂದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News