×
Ad

ನಾಪತ್ತೆಯಾಗಿದ್ದ ವ್ಯಕ್ತಿಯ ನಿಗೂಢ ಸಾವು

Update: 2016-07-06 00:21 IST

ಹಿರಿಯಡ್ಕ, ಜು.5: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಇಂದು ಬೆಳಗ್ಗೆ ಕುಕ್ಕೆಹಳ್ಳಿ ಗ್ರಾಮದ ಬಜೆ ಹಾಡಿಯಲ್ಲಿ ಪತ್ತೆಯಾಗಿದೆ.
   ಹಾವಂಜೆ ಬಾಣಬೆಟ್ಟು ನಿವಾಸಿ ನಾರಾಯಣ ಶೆಟ್ಟಿ(55) ಮೃತಪಟ್ಟವರಾಗಿದ್ದಾರೆ. ಇವರು ಜು.4ರಂದು ಬೆಳಗ್ಗೆ ಬೆಳ್ಳಂಪಳ್ಳಿಗೆಯಲ್ಲಿರುವ ಪತ್ನಿ ಮನೆಗೆಂದು ಹೇಳಿ ಹೋದವರು ನಾಪತ್ತೆಯಾಗಿದ್ದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಥಳೀಯರಿಂದ ದೊರೆತ ಮಾಹಿತಿಯಂತೆ ಅವರ ಮೃತದೇಹ ಬಜೆ ಹಾಡಿಯಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News