×
Ad

ಶಿಸ್ತನ್ನು ಅಳವಡಿಸಿಕೊಂಡಲ್ಲಿ ಶೈಕ್ಷಣಿಕ ಪ್ರಗತಿ: ಡಾ.ಹನಿ ಕ್ಯಾಬ್ರಲ್

Update: 2016-07-06 00:23 IST


ಮಂಗಳೂರು, ಜು.5: ಶಿಕ್ಷಣದ ಅವಿಭಾಜ್ಯ ಅಂಗವಾದ ಶಿಸ್ತನ್ನು ಅಳವಡಿಸಿಕೊಂಡಲ್ಲಿ ಮಾತ್ರ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯ ಎಂದು ಕಾಸಸ್ ಕಾರ್ಯದರ್ಶಿ, ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಹನಿ ಕೆಬ್ರಾಲ್ ಹೇಳಿದರು.

ನಗರದ ಬಲ್ಮಠದ ಜತ್ತನ್ನ ಹಾಲ್ನಲ್ಲಿ ಮಂಗಳವಾರ ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿ ಸಂಸ್ಥಾಪಕ ರೆ.ಡಾ.ಡಿ.ಸಿ. ಜತ್ತನ್ನ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾಸಸ್ 

ಡೇ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಸರ ತಜ್ಞ ಡಾ. ಎಲ್
.ಸಿ. ಸೋನ್ಸ್ ಮಾತನಾಡಿ, ನೈಸರ್ಗಿಕವಾಗಿ ಕೃಷಿಗೆ ಹೇಳಿ ಮಾಡಿಸಿರುವ ವಾತಾವರಣ ಈ ಭಾಗದಲ್ಲಿದ್ದು, ಕೃಷಿಯ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಗ್ಲೋಬಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುಶೀಲ್ಜತ್ತನ್ನ ಅತಿಥಿಗಳಾಗಿ ಆಗಮಿಸಿದ್ದರು.

ಇಂಡೋ-ಅಮೆರಿಕನ್ ಹೈಬ್ರಿಡ್ ಸೀಡ್ಸ್ (ಭಾರತ) ಅಧ್ಯಕ್ಷ ಮನಮೋಹನ್ ಅತ್ತಾವರ್, ‘ದಿ ಹಿಸ್ಟರಿ ಆಫ್ ಕ್ರಿಶ್ಚಿಯನ್ ಇನ್ ಕರ್ನಾಟಕ 19 ಆ್ಯಂಡ್ 20 ಸೆಂಚುರಿ’ ಹಾಗೂ ‘ಮಿಷನ್ಮೂವ್ಸ್ 2015: ಬಾಶೆಲ್ ಮಿಷನ್
ದ್ವಿಶತಮಾನೋತ್ಸವ’ ಕೃತಿಗಳನ್ನು ಬಿಡುಗಡೆ ಮಾಡಿದರು. ಕ್ರಿಸ್ಟೋಫರ್ ಜಾರ್ಜ್, ಡಾ.ಸಿ.ಎಲ್. ಫರ್ಟಡೋ, ಎಚ್.ಎಸ್.ವಿಲ್ಸನ್, ಪ್ರೊ.ಸಾಗರ ಸುಂದರರಾಜ್, ಬೆನೆಟ್ ಅಮ್ಮಣ್ಣ, ಎಬ್ನೆಝರ್ ಜತ್ತನ್ನ, ಪ್ರೊ.ಎ.ವಿ.ನಾವಡ್ 
ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಥಿಯೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಅಡಿಯಲ್ಲಿ ಹಂಪಿ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ಗಳಿಸಿದ ಡಾ. ಮಧುಬಾಲಾ, ಡಾ.ಅಶೋಕ ರಾಕೇಶ್
, ಡಾ. ರೋಹಿಣಾಕ್ಷ ಅವರನ್ನು ಸನ್ಮಾನಿಸಲಾಯಿತು. ಕಾಸಸ್ನ ಕೋಶಾಧಿಕಾರಿ ಡಾ.ಎಫ್. ಅನಿಲ್‌ಕುಮಾರ್ ಸ್ವಾಗತಿಸಿದರು. ರೋಹನ್ 
ಪರಿಚಯಿಸಿದರು. ಎಚ್ಟಿಟಿಐ ಪ್ರಾಂಶುಪಾಲ ಚೇತನ್ ಆರ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News