×
Ad

ಮಂಗಳೂರಿನಲ್ಲಿ ಸಂಭ್ರಮದ ಈದುಲ್ ಫಿತ್ರ್

Update: 2016-07-06 09:14 IST

ಮಂಗಳೂರು, ಜು.6:ಪವಿತ್ರ ರಮಝಾನ್ ತಿಂಗಳ ಉಪವಾಸ ಮಂಗಳವಾರ ಮುಸ್ಸಂಜೆ ಮುಕ್ತಾಯವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ಸಡಗರ, ಸಂಭ್ರಮದಿಂದ ಬುಧವಾರ ‘ಈದುಲ್ ಫಿತ್ರ್ ’ ಆಚರಿಸಿದರು.

ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಮಸೀದಿ ಯಲ್ಲಿ ಬೆಳಗ್ಗೆ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್‌ರವರ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ನೆರವೇರಿತು.

ಈ ಸಂದರ್ಭ ಮಾತನಾಡಿ ದ ಖಾಝಿ ಅಲ್ಹಾಜ್ ತ್ವಾಕ ಅಹ್ಮ ದ್ ಮುಸ್ಲಿಯಾರ್ ಅವರು ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.

ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿ ಅಧ್ಯಕ್ಷ ಯೆನೆಪೊಯ ಅಬ್ದುಲ್ಲಾ ಕುಂಞಿ, ಸಚಿವ ಯು.ಟಿ.ಖಾದರ್, ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ದ.ಕ. ಜಿಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಕೇಂದ್ರ ಜುಮಾ ಮಸೀದಿ ಖತೀಬ್ ಸದಖುತ್ತಲ್ ಫೈಝಿ, ಈದ್ಗಾ ಜುಮ್ಮಾ ಮಸೀದಿ ಖತೀಬ್ ಸದಖುತ್ತಲ್ಲ ನದಲಿ, ಬಾಷಾ ತಂಙಳ್, ಹನೀಫ್ ಹಾಜಿ, ಸಹಿತ ಪ್ರಮುಖ ಗಣ್ಯರು ಈದ್ಗಾ ಮಸೀದಿಯಲ್ಲಿ ನಡೆ ದ ಈದ್ ನಮಾಝ್‌ನಲ್ಲಿ ಪಾಲ್ಗೊಂಡರು.

ಈದ್ಗಾ ಮಸೀದಿಯಲ್ಲಿ ಈದ್ ನಮಾಝ್ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮನುಷ್ಯ ಮನುಷ್ಯರ ನಡುವೆ ಇರುವ ದ್ವೇಷ ತೊಲಗಿ ಪ್ರೀತಿ ವಿಶ್ವಾಸ ಮೂಡಿಸಲು ಆದ್ಯತೆ ನೀಡಬೇಕಾಗಿದೆ. ಪ್ರತಿಯೊಬ್ಬರ ನಡವಳಿಕೆಯಲ್ಲಿ ಪ್ರೀತಿ ವಿಶ್ವಾಸ ಇದ್ದರೆ ಸುಂದರ ಸಮಾಜ ನಿರ್ಮಾಣವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಯು.ಟಿ.ಖಾದರ್, ಜನರು ಒಬ್ಬರನ್ನೊಬ್ಬರು ಸಹಿಸಿಕೊಳ್ಳುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಬೇಕು. ಪ್ರೀತಿ ಸಹೋದರತೆಯಿಂದ ಬಾಳುವಂತಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್.ಲೋಬೊ, ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಶೇಖರ್, ಮಾಜಿ ಶಾಸಕ ಯೋಗೀಶ್ ಭಟ್, ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ.ಬಿ.ಪುರಾಣಿಕ್, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಫಾ.ಸ್ವೀಬರ್ಟ್ ಡಿಸಿಲ್ವ, ಸಂತ ಅಲೋಶಿಯಸ್ ಕಾಲೇಜು ರೆಕ್ಟರ್ ಫಾ. ಪ್ರದೀಪ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಈದ್ ನಮಾಝ್ ನಿರ್ವಹಿಸಿದ ಮುಸ್ಲಿಮರು ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿ, ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.

ನಗರದ ಪಂಪ್‌ವೆಲ್‌ನ ಮಸ್ಜಿದುತ್ತಖ್ವಾ, ಫಳ್ನೀರ್‌ನ ಮಸೀದಿ ಅಲ್ ಇಹ್ಸಾನ್, ಕುದ್ರೋಳಿಯ ಜಾಮಿಯ ಮಸೀದಿ, ಪೊಲೀಸ್ ಲೇನ್ ನ ಫೌಜಿ ಜುಮಾ ಮಸೀದಿ, ಬೋಳಾರದ ಮುಹಿಯುದ್ದೀನ್ ಜುಮಾ ಮಸೀದಿ, ಜೆಪ್ಪು ಕುಡ್ಪಾಡಿಯ ಬದ್ರಿಯಾ ಜುಮಾ ಮಸೀದಿ, ಜೆಪ್ಪು ಮುಹಿಯುದ್ದೀನ್ ಜುಮಾ ಮಸೀದಿ, ಹಂಪನಕಟ್ಟೆಯ ಮಸ್ಜಿ ದ್ ನೂರ್, ಬಂದರ್‌ನ ಕಚ್ಚೀ ಮೇಮನ್ ಮಸೀದಿ, ತೊಕ್ಕೊಟಿನ ಮಸ್ಜಿದುಲ್ ಹುದಾ, ಕೃಷ್ಣಾಪುರದ ಬದ್ರಿಯಾ ಜುಮಾ ಮಸೀದಿ ಅಸ್ತಲ್, ಸ್ಟೇಟ್ ಬ್ಯಾಂಕ್‌ನ ಮಸ್ಜಿ ದ್ ಇಬ್ರಾಹೀಂ ಖಲೀಲ್ ಹಾಗು ಜಿಲ್ಲೆಯ ನಾನಾ ಕಡೆ ಮಸೀದಿ ಮತ್ತು ಈದ್ಗಾಗಳಲ್ಲಿ ಈದ್ ನಮಾಝ್ ಹಾಗು ಖುತ್ಬಾ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News