×
Ad

ಉಡುಪಿ : ಸರ್ವಧರ್ಮೀಯರಿಗೆ ಸಿಹಿ ಹಂಚಿ ಈದ್ ಆಚರಣೆ

Update: 2016-07-06 10:45 IST

ಉಡುಪಿ, ಜು.6: ಉಡುಪಿ ಬ್ರಹ್ಮಗಿರಿಯ ನಾಯರ್‌ಕೆರೆಯ ಹಾಶಿಮಿ ಮಸೀದಿಯಲ್ಲಿ ಈದುಲ್ ಫಿತ್ರ್‌ನ್ನು ಆಚರಿಸಲಾಯಿತು. ಬೆಳಗ್ಗೆ 8:30ಕ್ಕೆ ಮಸೀದಿಯಲ್ಲಿ ಮೌಲಾನಾ ಹಾಶಿಮ್ ಉಮ್ರಿ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ನೆರವೇರಿತು. ಮಹಿಳೆಯರು ಮಕ್ಕಳ ಸಹಿತ ನೂರಾರು ಮಂದಿ ನಮಾಝ್‌ನಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಮಸೀದಿ ಸುತ್ತಮುತ್ತಲಿನ ಸರ್ವಧರ್ಮೀಯರಿಗೆ ಸಿಹಿ ತಿಂಡಿಗಳನ್ನು ಹಂಚಿ ಶುಭಾಶಯಗಳನ್ನು ಕೋರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News